ಪೌರೋಹಿತ್ಯ ಕಿತ್ತೊಗೆಯಬೇಕು: ದೇಜಗೌ ವಿವಾದಾತ್ಮಕ ಹೇಳಿಕೆ

ಭಾನುವಾರ, 21 ಸೆಪ್ಟಂಬರ್ 2014 (15:39 IST)
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಿಂದು ಪದ ಭಾರತದ್ದಲ್ಲ, ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಪದವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ ಬೆನ್ನಲ್ಲೇ,  ಪೌರೋಹಿತ್ಯದಂತ ಕೆಟ್ಟ ಪದ್ಧತಿಯನ್ನು ಕಿತ್ತೊಗೆಯಬೇಕು.

ಪೌರೋಹಿತ್ಯ ಇರೋವರೆಗೆ ದೇಶದಲ್ಲಿ ಶಾಂತಿಯಿಲ್ಲ ಎಂದು ಹಿರಿಯ ಸಾಹಿತಿ ಜವರೇಗೌಡ ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ಬಸವಣ್ಣ, ಕುವೆಂಪು ಕೂಡ ಹೀಗೆ ಹೇಳಿದ್ದರು ಎಂದು ಜವರೇಗೌಡ ಹೇಳಿದರು. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಾ ಅವರು ಮೇಲಿನ ಮಾತನ್ನು ಹೇಳಿದರು.

ದೇಜಗೌ ಅವರ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅನೇಕ ಗಣ್ಯರು ದೇಜಗೌ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ