ಜಯಲಲಿತಾ ಹಣೆಬರಹ ಇಂದು ಹೈಕೋರ್ಟ್‌ನಲ್ಲಿ ನಿರ್ಧಾರ

ಮಂಗಳವಾರ, 30 ಸೆಪ್ಟಂಬರ್ 2014 (10:20 IST)
ಜಯಲಲಿತಾ ಹಣೆಬರಹ ಇಂದು ನಿರ್ಧಾರವಾಗಲಿದ್ದು, ಒಂದು ವೇಳೆ ವಿಶೇಷ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಅಮಾನತನಲ್ಲಿಟ್ಟು ಅವರಿಗೆ ಜಾಮೀನು ನೀಡುತ್ತಾರಾ ಎನ್ನುವ ಕುತೂಹಲ ಕೆರಳಿಸಿದೆ. ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಅವರು ಜಯಾ ಪರ ವಕಾಲತ್ತು ವಹಿಸಲಿದ್ದು, ನ್ಯಾ. ರತ್ನಕಲಾ ಅವರು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಜಯಲಲಿತಾ ಶಿಕ್ಷೆ ಅಮಾನತಿನಲ್ಲಿಡುವುದಕ್ಕೆ ಮತ್ತು ಶಿಕ್ಷೆಗೆ ತಡೆ ನೀಡುವುದಕ್ಕೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.
 
ಜಯಾಗೆ 3 ವರ್ಷಗಳಿಗಿಂತ ಹೆಚ್ಚು ಅವಧಿಯ ಶಿಕ್ಷೆ ನೀಡಿರುವುದರಿಂದ ಜಯಲಲಿತಾ ಪ್ರಕರಣದಲ್ಲಿ ಹೈಕೋರ್ಟ್ ಮಾತ್ರ ಅವರಿಗೆ ಜಾಮೀನು ನೀಡಲು ಸಾಧ್ಯವಿದೆ. ಜಯಾ ವಿರುದ್ಧ ಶಿಕ್ಷೆಗೆ ತಡೆ ಸಿಕ್ಕಿದರೆ ಶಾಸಕರಾಗಿ ಜಯಲಲಿತಾ ಅವರ ಅನರ್ಹತೆ ಅನೂರ್ಜಿತಗೊಳ್ಳುತ್ತದೆ.

ಜಯಾಗೆ ನೀಡಿರುವ ಶಿಕ್ಷೆಯನ್ನು ಮೇಲಿನ ಕೋರ್ಟ್ ರದ್ದುಮಾಡುವ ತನಕ ಜಯಾ 10 ವರ್ಷಗಳವರೆಗೆ ಚುನಾವಣೆ ಸ್ಪರ್ಧೆಯಿಂದ ನಿಷೇಧಿತರಾಗುತ್ತಾರೆ. ಅವರು ಜೈಲಿನಲ್ಲಿದ್ದ 4 ವರ್ಷಗಳ ಅವಧಿ ಮತ್ತು ಬಿಡುಗಡೆಯಾದ ನಂತರ 6 ವರ್ಷಗಳ ಅವಧಿ ಒಟ್ಟು 10 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. 

ವೆಬ್ದುನಿಯಾವನ್ನು ಓದಿ