ಜಯಾಗೆ ಒಲಿಯಲಿಲ್ಲ ಬಿಡುಗಡೆ ಭಾಗ್ಯ, 6ರವರೆಗೆ ಜೈಲೇ ಗತಿ

ಬುಧವಾರ, 1 ಅಕ್ಟೋಬರ್ 2014 (11:03 IST)
ಜಯಲಲಿತಾ ಜಾಮೀನು ಅರ್ಜಿಯ ವಿಚಾರಣೆಯನ್ನು ರಜಾಕಾಲದ ನ್ಯಾಯಪೀಠದ ನ್ಯಾಯಮೂರ್ತಿ ರತ್ನಕಲಾ ಸೋಮವಾರಕ್ಕೆ ಮುಂದೂಡಿರುವುದರಿಂದ ಜಯಲಲಿತಾಗೆ ಸೋಮವಾರದವರೆಗೆ ಜೈಲೇ ಗತಿಯಾಗಿದೆ.  ಜಯಲಲಿತಾ ಸಲ್ಲಿಸಿರುವ ಅರ್ಜಿಯ ಸಂಪೂರ್ಣ ವಿಚಾರಣೆ ಅಗತ್ಯವಿದ್ದು, ಇದಕ್ಕೆ ರಜಾ ಕಾಲದ ಪೀಠ ಸೂಕ್ತವಲ್ಲ. ಅರ್ಜಿಯ ಎಲ್ಲಾ ಅಂಶಗಳನ್ನು ಪರಿಗಣಿಸದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅರ್ಜಿಯ ಸಂಪೂರ್ಣ ವಿಚಾರಣೆ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆದ್ದರಿಂದ ಸಾಮಾನ್ಯ ಪೀಠದಿಂದಲೇ ಅರ್ಜಿ ವಿಚಾರಣೆ ನಡೆಯುವುದು ಸೂಕ್ತವೆಂದು ನ್ಯಾ. ರತ್ನಕಲಾ ಅಭಿಪ್ರಾಯಪಟ್ಟರು. ಈ ನಡುವೆ ಜಯಾಪರ ವಕಾಲತ್ತು ವಹಿಸಿರುವ ವಕೀಲ ಜೇಠ್ಮಲಾನಿ ಕೋರ್ಟ್‌ಗೆ ಆಗಮಿಸಿದರು. ಸರ್ಕಾರಿ ಪ್ರಾಸಿಕ್ಯೂಟರ್ ಭವಾನಿ ಸಿಂಗ್ ಕೂಡ ಕೋರ್ಟ್‌ಗೆ ಆಗಮಿಸಿ ತಕರಾರು ಅರ್ಜಿ ತಮ್ಮ ಬಳಿ ಸಿದ್ಧವಿದೆ ಎಂದು ಹೇಳಿದರು.

ಆದರೆ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿರುವುದಾಗಿ ಪೀಠ ತಿಳಿಸಿರುವುದರಿಂದ ಜಯಲಲಿತಾ ಸೋಮವಾರದವರೆಗೆ ತಮ್ಮ ಜಾಮೀನಿಗಾಗಿ ಕಾಯಬೇಕಾಗುತ್ತದೆ. ಏತನ್ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕೋರ್ಟ್‌ನಲ್ಲಿ ಸರ್ಪಗಾವಲು ಹಾಕಿದ್ದರು. ಸೋಮವಾರ 6ನೇ ತಾರೀಖು ಬಕ್ರೀದ್ ರಜೆ ಕೋರ್ಟ್‌ಗೆ ಘೋಷಣೆಯಾದರೆ 7ನೇ ತಾರೀಖು ವಿಚಾರಣೆ ನಡೆಯಬಹುದೆಂದು ಹೇಳಲಾಗುತ್ತದೆ.

ವೆಬ್ದುನಿಯಾವನ್ನು ಓದಿ