ಜಯಲಲಿತಾ ಅರ್ಜಿ ವಿಚಾರಣೆ ಮತ್ತೆ ನಾಳೆಗೆ ಹಿಂದೂಡಿಕೆ

ಮಂಗಳವಾರ, 30 ಸೆಪ್ಟಂಬರ್ 2014 (16:25 IST)
ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ನೀಡಿದ 4 ವರ್ಷಗಳ ಶಿಕ್ಷೆಯ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ಎಚ್. ವಘೇಲಾ ಒಪ್ಪಿಗೆ ಮೇಲೆ ನಾಳೆ ನಡೆಸಲು ಆದೇಶ ನೀಡಲಾಗಿದೆ.  

ಜಯಲಲಿತಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ. ರತ್ನಕಲಾ ಅವರು ಸರ್ಕಾರಿ ಅಭಿಯೋಜಕರ ನೇಮಕವಾಗದಿದ್ದರಿಂದ 6ನೇ ತಾರೀಖಿಗೆ ವಿಚಾರಣೆಯನ್ನು ಮುಂದೂಡಿತ್ತು. ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ದ ಅರ್ಜಿ ವಿಚಾರಣೆ ರಾಜ್ಯಸರ್ಕಾರದ ವ್ಯಾಪ್ತಿಗೆ ಬರಲಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿತ್ತು.  

ಜೆ. ಜಯಲಲಿತಾ ಪರ ವಕೀಲರು ನಾಳೆ ವಿಚಾರಣೆಯನ್ನು ನಡೆಸುವಂತೆ ರಾಮ್ ಜೇಠ್ಮಲಾನಿ ಸಲಹೆಯಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ನಾಳೆ ವಿಚಾರಣೆ ನಡೆಸಲು ಸಮ್ಮತಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ