ಗುರುತಿನ ಚೀಟಿ ಇಲ್ಲದೆ ಮತದಾನಕ್ಕೆ ಬಂದ ನಟಿ ಜಯಮಾಲಾ

ಶನಿವಾರ, 13 ಫೆಬ್ರವರಿ 2016 (11:03 IST)
ಉಪ ಚುನಾವಣೆ ಮತ್ತು ಪಂಚಾಯತ್ ಚುನಾವಣೆಗಳಿಗೆ ಬಿರುಸಿನ ಮತದಾನ ಮುಂದುವರೆದಿದ್ದು ಜನರು ಸಾಲುಗಟ್ಟಿ ಮತದಾನ ನಡೆಸುತ್ತಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಬಂದಿದ್ದ ಚಿತ್ರನಟಿ, ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ, ಮತ್ತವರ ಮಗಳು ನಟಿ ಸೌಂದರ್ಯ ಅವರನ್ನು ಗುರುತಿನ ಚೀಟಿ ತಂದಿರದ ಕಾರಣಕ್ಕ ವೋಟ್ ಹಾಕಲು ಅವಕಾಶ ನೀಡದಿದ್ದ ಘಟನೆ ಡಾಲರ್ಸ್ ಕಾಲೋನಿಯ ಗೋಪಾಲ ರಾಮನಾರಾಯಣ ಸರ್ಕಾರಿ ಶಾಲೆಯ 51 ನೇ ಮತಗಟ್ಟೆಯಲ್ಲಿ ನಡೆಯಿತು. 

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಬಂದಿದ್ದ ಚಿತ್ರನಟಿ, ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ, ಮತ್ತವರ ಮಗಳು ನಟಿ ಸೌಂದರ್ಯ ಅವರನ್ನು ಗುರುತಿನ ಚೀಟಿ ತಂದಿರದ ಕಾರಣಕ್ಕ ವೋಟ್ ಹಾಕಲು ಅವಕಾಶ ನೀಡದಿದ್ದ ಘಟನೆ ಡಾಲರ್ಸ್ ಕಾಲೋನಿಯ ಗೋಪಾಲ ರಾಮನಾರಾಯಣ ಸರ್ಕಾರಿ ಶಾಲೆಯ 51 ನೇ ಮತಗಟ್ಟೆಯಲ್ಲಿ ನಡೆಯಿತು. 
 
ಪುನಃ ಮನೆಗೆ ಮರಳಿದ ಅವರು ಗುರುತಿನ ಚೀಟಿಯೊಂದಿಗೆ ಮರಳಿ ಮತವನ್ನು ಚಲಾಯಿಸಿದರು. 
 
ನಾನು ಮಗಳ ಕೈಯಲ್ಲಿ ಗುರುತಿನ ಟೀಟಿಗಳನ್ನು ಕೊಟ್ಟಿದ್ದೆ. ಆದರೆ ಅವಳು ಮನೆಯಲ್ಲೇ ಮರೆತು ಬಂದಿದ್ದಳು ಎಂದು ಜಯಮಾಲಾ ಗುರುತಿನ ಚೀಟಿ ಇಲ್ಲದೆ ಬಂದಿದ್ದಕ್ಕೆ ಸ್ಪಷ್ಟನೆ ನೀಡಿದರು.
 
ಮತದಾರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಿಮ್ಮ ಹಕ್ಕು ಚಲಾಯಿಸಿ. ಕೇವಲ ಸಮಸ್ಯೆಗಳ ಕುರಿತು ಮಾತನಾಡಿದರೆ ಪ್ರಯೋಜನವಿಲ್ಲ. ನಿಮ್ಮ ಹಕ್ಕನ್ನು ಮೊದಲು ಚಲಾಯಿಸಿ ಎಂದು ಅವರು ಮತದಾರರರಲ್ಲಿ ಮನವಿ ಮಾಡಿದರು. 
 

ವೆಬ್ದುನಿಯಾವನ್ನು ಓದಿ