ಜಿಡಿಎಸ್‌ನಿಂದ ಕಾಂಗ್ರೆಸ್‌ಗೆ ಕೇವಲ 2 ಷರತ್ತು ಮಾತ್ರ: ವೈ.ಎಸ್.ವಿ.ದತ್ತಾ

ಗುರುವಾರ, 3 ಸೆಪ್ಟಂಬರ್ 2015 (16:49 IST)
ಬಿಬಿಎಂಪಿ ಗದ್ದುಗೆಯನ್ನೇರುವ ವಿಚಾರದಲ್ಲಿ ತಾವು ಮೈತ್ರಿ ಮಾಡುಕೊಳ್ಳುತ್ತಿದ್ದು, ಕಾಂಗ್ರೆಸ್ ಗೆ ಕೇವಲ ಎರಡು ಷರತ್ತುಗಳನ್ನು ಮಾತ್ರವೇ ಹಾಕಿದ್ದು ಮಕ್ಕ ಯಾವುದೇ ಷರತ್ತುಗಳನ್ನು ಹಾಕಿಲ್ಲ ಎಂದು ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತಾ ಅವರು ಇಂದು ಸ್ಪಷ್ಟಪಡಿಸಿದ್ದಾರೆ. 
 
ಮಾಧ್ಯಮಗಲೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರೊಬ್ಬರಿಗೂ ಕೂಡ ಮುಜುಗರವಾಗದಂತೆ ನಡೆದುಕೊಲ್ಳಬೇಕಾದಲ್ಲಿ ಬಿಬಿಎಂಪಿಯನ್ನು ಮೂರು ಬಾಗಗಳನ್ನಾಗಿ ವಿಭಾಗಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕು. ಇದು ಒಂದು ಷರತ್ತಾದರೆ ಮತ್ತೊಂದು ಬಿಜೆಪಿ ಅಧಿಕಾರಾವಧಿಯಲ್ಲಿ ಬಿಬಿಎಂಪಿಯು 9600 ಕೋಟಿ ಸಾಲ ಮಾಡಲಾಗಿದೆ. ಆದರೆ ಈ ಸಾಲಕ್ಕೆ ಪ್ರಸ್ತುತ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂಬ ಎರಡು ಷರತ್ತುಗಳನ್ನಷ್ಟೇ ವಿಧಿಸಿದ್ದೇವೆ ಎಂದ ಅವರು ಬೇರಾವುದೇ ಷರತ್ತುಗಳನ್ನಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. 
 
ಇನ್ನು ನಿನ್ನೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಕೆಪಿಸಿಸ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ಉಪ ಮೇಯರ್ ಸ್ಥಾನ ಜೆಡಿಎಸ್‌ಗೆ ನೀಡುವಂತೆ ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. 

ವೆಬ್ದುನಿಯಾವನ್ನು ಓದಿ