ದೇವೇಗೌಡರ ವಿರುದ್ಧ ಜೆಡಿಎಸ್ ಶಾಸಕನ ವಾಗ್ದಾಳಿ

ಗುರುವಾರ, 9 ಜೂನ್ 2016 (18:24 IST)
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನಮ್ಮನ್ನು ಪಕ್ಷದಿಂದ ದೂರವಿಟ್ಟಿದ್ರು ಎಂದು ಮಾಗಡಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಗಂಭೀರವಾಗಿ ಆರೋಪಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಮ್ಮ ತಂಡದ ಜೊತೆ ಇದ್ದಾಗ ಪಕ್ಷ ಹೇಗಿತ್ತು. ನಾವು ಪಕ್ಷದಿಂದ ಹೊರ ನಡೆದ ಮೇಲೆ ಪಕ್ಷ ಹೇಗಾಗಿದೆ ನೋಡಿ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
 
ನಾವು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಬಳಸಿಕೊಳ್ಳುತ್ತೇವೆ ಎಂದು ದೇವೇಗೌಡರು ನಮ್ಮನ್ನು ಪಕ್ಷದಿಂದ ದೂರವಿಟ್ಟಿದ್ರು. ಇಗ ನಾನು ಪಕ್ಷದಿಂದ ದೂರವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬೀದಿಪಾಲಾಗುವ ಹಂತಕ್ಕೆ ಬಂದು ತಲುಪಿದೆ ಎಂದು ಹೇಳಿದ್ದಾರೆ.
 
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಧಿಕಾರ ಮತ್ತು ಹಣದ ಆಮಿಷ ಒಡ್ಡಿದ್ದರು. ಆದರೂ ಸಹ ನಾನು ಪಕ್ಷ ತೊರೆದಿರಲಿಲ್ಲ. ಇಗ ಪಕ್ಷದ ನಾಯಕರ ತಾರತಮ್ಯಗಳಿಂದ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ ಎಂದು ಮಾಗಡಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ