ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಯುವತಿಯ ಮೇಲೆ ಅವರ ಸಂಬಂಧಿಯೇ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ತಡವಾಗಿ ಬೆಳಕಿಗೆ ಬಂದ ಘಟನೆ ಅಂಚೆಪಾಳ್ಯದಲ್ಲಿ ನಡೆದಿದೆ.
ಅ.14 ರಂದು ಈ ಘಟನೆ ನಡೆದ್ದಿದ್ದು, ಧರ್ಮಪ್ಪ (45) ಎಂಬಾತ ಈ ನೀಚ ಕೃತ್ಯವನ್ನು ಎಸಗಿದ್ದಾನೆ ಎಂದು ತಿಳಿದು ಬಂದಿದೆ.
19 ವರ್ಷದ ಯುವತಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದಳು. ಒಂದು ದಿನ ಯಾರೂ ಇಲ್ಲದೇ ಇರುವ ಸಮಯವನ್ನು ನೋಡಿ ಸಂಬಂಧಿನೇ ಬಂದು ಈ ನೀಚ ಕೃತ್ಯ ನಡೆಸಿದ್ದಾನೆ.
ಆದರೆ ಯುವತಿ ಈ ವಿಷಯವನ್ನು ಯಾರಲ್ಲೂ ತಿಳಿಸದೆ ತನ್ನಲ್ಲಿಯೇ ಬಚ್ಚಿಟ್ಟುಕೊಂಡಿದ್ದಳು, ಇತ್ತೀಚೆಗೆ ತನ್ನ ತಂದೆ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ನೆಲಮಂಗಲ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.