ಲೋಕಾಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್

ಮಂಗಳವಾರ, 21 ಅಕ್ಟೋಬರ್ 2014 (11:54 IST)
ಕರ್ನಾಟಕ ವಿವಿ ನೇಮಕಾತಿ ಅವ್ಯವಹಾರ ಹಾಗೂ ಭ್ರಷ್ಟಾಚಾರ  ಪ್ರಕರಣದಲ್ಲಿ ಬಂಧಿತರಾಗಿರುವ ವಿಸಿ ವಾಲೀಕಾರ್ ಅವರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಾಲೀಕರ್‌ಗೆ 2001ರಲ್ಲಿ ಬೈಪಾಸ್ ಸರ್ಜರಿ ಆಗಿತ್ತೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರ ವಿಚಾರಣೆ ನಡೆಯುವುದಿಲ್ಲ. ವಾಲೀಕರ್ ಮತ್ತು ಇತರರು ಲೋಕಾಯುಕ್ತ ಕೋರ್ಟ್‌ಗೆ ಈಗಾಗಲೇ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಜಾಮೀನಿಗೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಿದೆ.

ಬಂಧಿತರಾದ ಉಳಿದ  ಇಬ್ಬರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸದಿದ್ದರಿಂದ ಲೋಕಾಯುಕ್ತ ಪೊಲೀಸರನ್ನು  ಧಾರವಾಡ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಎಸ್ಕಾರ್ಟ್ ಸೌಲಭ್ಯ ಇಲ್ಲದಿದ್ದರಿಂದ ಹಾಜರುಪಡಿಸಲು ಸಾಧ್ಯವಾಗಲಿಲ್ಲವೆಂದು ಲೋಕಾಯುಕ್ತ ಪೊಲೀಸರು ಹೇಳಿದರೂ ಅದು ನ್ಯಾಯಾಧೀಶರಿಗೆ ಸಮಾಧಾನ ತರಲಿಲ್ಲ. ಪರೀಕ್ಷಾ ವಿಭಾಗದ ಕುಲಸಚಿವ ಪೋತೆ ಮತ್ತು  ವಿಸಿ ಆಪ್ತ ಕಾರ್ಯದರ್ಶಿ ಎಲ್.ಎಲ್.ಬೀಳಗಿ ಅವರನ್ನು ಹಾಜರುಪಡಿಸಲು ಕೋರ್ಟ್ ಆದೇಶಿಸಿತ್ತು. 

ವೆಬ್ದುನಿಯಾವನ್ನು ಓದಿ