ನ್ಯಾಯಾಧೀಶ ಎಸ್.ಎಸ್.ಮುರಗೋಡ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪನ್ನು ಪ್ರಕಟಿಸಿದ್ದು, 7 ವರ್ಷ ಕಠಿಣ ಶಿಕ್ಷೆ ಪ್ರಕಟಿಸುವ ಜೊತೆಗೆ 2 ಸಾವಿರ ದಂಡವನ್ನೂ ವಿಧಿಸಿದೆ. ಶಿಕ್ಷೆಗೊಳಗಾದ ಅತ್ಯಾಚಾರ ಆರೋಪಿಯನ್ನು ದಾದಾ ಕಲಂದರ್ ಚಿಂಚೋಳಿ(21) ಎನ್ನಲಾಗಿದ್ದು, ಈತ 2013ರ ಜ.10ರಂದು 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.