ಯಡಿಯೂರಪ್ಪ ವಿರುದ್ಧ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ: ಕೆ.ಜೆ.ಜಾರ್ಜ್

ಶುಕ್ರವಾರ, 16 ಡಿಸೆಂಬರ್ 2016 (13:49 IST)
ಆಧಾರ ರಹಿತ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
 
ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭಾರಿ ಮೊತ್ತದ ಕಿಕ್‌ಬ್ಯಾಗ್ ಪಡಿದಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದರು. ಕಾಮಗಾರಿ ಆರಂಭಕ್ಕೂ ಮುನ್ನವೇ ಸಚಿವ ಕೆ.ಜೆ.ಜಾರ್ಜ್ ತಮಗೆ ಬೇಕಾದ ಕಂಪೆನಿಗೆ ಬ್ರಿಡ್ಜ್ ನಿರ್ಮಿಸಲು ಗುತ್ತಿಗೆ ನೀಡಿದ್ದಾರೆ. ಇದರಲ್ಲಿ ಸಚಿವರಿಗೆ ಕನಿಷ್ಟ 4 ನೂರು ಕೋಟಿ ಕಪ್ಪು ಕಾಣಿಕೆ ಸಂದಾಯವಾಗಲಿದೆ ಎಂದು ಬಿಎಸ್‌ವೈ ಆರೋಪಿಸಿದ್ದರು.
 
ಬಿಎಸ್‌ವೈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿರುವ ಸಚಿವ ಕೆ.ಜೆ.ಜಾರ್ಜ್ ತಮ್ಮ ವಿರುದ್ಧದ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಸವಾಲ್ ಹಾಕಿದ್ದರು. ಆದರೆ, ಆರೋಪದ ಕುರಿತು ಯಾವುದೇ ಪುರಾವೆ ನೀಡದ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾನನಷ್ಟು ಮೊಕದ್ದಮೆ ದಾಖಲಿಸಲು ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ