ವಿಶೇಷ ವಿಮಾನದ ಮೂಲಕ ರಾಮೇಶ್ವರಂ ತಲುಪಿದ ಕಲಾಂ ಪಾರ್ಥಿವ ಶರೀರ

ಬುಧವಾರ, 29 ಜುಲೈ 2015 (12:58 IST)
ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿ ಶರೀರವು ತಮಿಳುನಾಡಿನ ಮಧುರೈ ತಲುಪಿದ್ದು, ರಾಜ್ಯದ ರಾಜ್ಯಪಾಲ ರೋಸಯ್ಯ ಸ್ವೀಕರಿಸಿ ಅಂತಿಮ ನಮನ ಸ್ಲಲಿಸಿದರು. 
 
ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ನಗರದ ಮಧುರೈಗೆ ತರಲಾಯಿತು. ಈ ವೇಳೆ ರಾಜ್ಯಪಾಲ ರೋಸಯ್ಯ ಅವರು ರಾಜ್ಯದ ಪರವಾಗಿ ಸ್ವೀಕರಿಸಿ ಬಳಿಕ ಅಂತಿಮ ನಮನ ಸಲ್ಲಿಸಿದರು. ತರುವಾಯ ಕಲಾಂ ಅವರ ಹುಟ್ಟೂರಾದ ಮನಾಥಂ ಜಿಲ್ಲೆಯ ರಾಮೇಶ್ವಂರಂಗೆ ತರಲಾಯಿತು. ಪ್ರಸ್ತುತ ರಾಜ್ಯದ ಗಣ್ಯ ವ್ಯಕ್ತಿಗಳು ಅಂತಿಮ ದರ್ಶನ ಪಡೆಯುತ್ತಿದ್ದು, ಮಧ್ಯಾಹ್ನದ ಬಳಿಕ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ. 
 
ಕಲಾಂ ಅವರು ಜುಲೈ  27ರಂದು ಮೆಘಾಲಯದ ಶಿಲ್ಲಾಂಗ್‌ನ ಐಐಎಂ ಸಂಸ್ಥೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದ ವೇಳೆ ಹೃದಯಾಘಾತಕ್ಕಾಳಗಾಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೆಲವೇ ಕ್ಷಣಗಳಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಪ್ರಸ್ತುತ ಪಾರ್ಥಿವ ಶರೀರವನ್ನು ದೆಹಲಿಯಿಂದ ರಾಮೇಶ್ವರಂಗೆ ತರಲಾಗಿದ್ದು, ನಾಳೆ ಅಂತಿಮ ಸಂಸ್ಕಾರ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ