ಮೈಸೂರಿನ ಲಲಿತ ಮಹಲ್ ಪ್ಯಾಲೆಸ್‌ನಲ್ಲಿ ಭಗವದ್ಗೀತೆ ಓದುತ್ತಿದ್ದ ಕಲಾಂ

ಬುಧವಾರ, 29 ಜುಲೈ 2015 (11:32 IST)
ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ದಿ. ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಮೈಸೂರು ರಾಜಮನೆತನದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಹಿನ್ನೆಲೆಯಲ್ಲಿ ಅರಮನೆಗೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ.  
 
ಹೌದು, ನಾಲ್ಕು ಬಾರಿ ಮೈಸೂರಿಗೆ ಆಗಮಿಸಿದ್ದ ಕಲಾಂ, ಇಲ್ಲಿನ ಲಲಿತ್ ಮಹಲ್ ಅರಮನೆಯ 222ನೇ ಕೊಠಡಿಯಲ್ಲಿ ತಂಗುತ್ತಿದ್ದರು. ಅಲ್ಲದೆ ನಾಲ್ಕನೇ ಬಾರಿ ಆಗಮಿಸಿದ್ದ ಅವರು, ಅರಮನೆಯಲ್ಲಿ ಮೂರು ಪುಸ್ತಕಗಳನ್ನು ಮರೆತು ಬಿಟ್ಟು ಹೋಗಿದ್ದರು. ಅವುಗಳನ್ನು ಪ್ರಸ್ತುತ ಅರಮನೆ ಸಿಬ್ಬಂದಿ ಅವುಗಳನ್ನು ಪಡೆದು ಹೋಟೆಲ್‌ನ ಶೋಕೇಸ್‌ನಲ್ಲಿಟ್ಟು ಸುರಕ್ಷಿತವಾಗಿ ಕಾಪಾಡುತ್ತಿದ್ದಾರೆ. 
 
ಇನ್ನು ಅರಮನೆಯಲ್ಲಿ ತಂಗಿದ್ದ ವೇಳೆಯಲ್ಲಿ ಅವರು ಕುರಾನ್, ಬೈಬಲ್ ಹಾಗೂ ಭಗವದ್ಗೀತೆಗಳನ್ನು ಓದುತ್ತಿದ್ದರು. ಅಲ್ಲದೆ ಬಿಡುವಿನ ವೇಳೆಯಲ್ಲಿ ಸಾಮಾನ್ಯರಂತೆ ಅರಮನೆ ಸಿಬ್ಬಂದಿಗಳೊಂದಿಗೆ ಕಾಲ ಕಳೆಯುತ್ತಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ