ಕಂಬಾಲಪಲ್ಲಿ ದಲಿತರ ಸಜೀವ ದಹನ: ಹೈಕೋರ್ಟ್‌ನಿಂದ 32 ಆರೋಪಿಗಳ ಖುಲಾಸೆ

ಗುರುವಾರ, 21 ಆಗಸ್ಟ್ 2014 (16:32 IST)
ಕಂಬಾರಪಲ್ಲಿ ದಲಿತದ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರ ಮೇಲೆ ಆರೋಪ ಕೇಳಿಬಂದಿದ್ದು, ಎಲ್ಲರನ್ನೂ ಕೋರ್ಟ್ ಖುಲಾಸೆಗೊಳಿಸಿದೆ.

ಕಂಬಾಲಪಲ್ಲಿಯಲ್ಲಿ ಏಳು ಜನ ದಲಿತರನ್ನು ಅವರ ಮನೆಯಲ್ಲಿಯೇ ಕಟ್ಟಿಹಾಕಿ ಸವರ್ಣೀಯರು ಮನೆಗೆ ಪೆಟ್ರೋಲ್ ಸುರಿದು ಜೀವಂತ ದಹಿಸಿದ್ದರು. ಕೋಲಾರದ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳನ್ನು ಖುಲಾಸೆ ಮಾಡಿ ಆದೇಶ ನೀಡಿತ್ತು. ಸರ್ಕಾರ ಈ ತೀರ್ಪಿನ ವಿರುದ್ದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಪ್ರಮುಖವಾಗಿ ಆರೋಪಿಗಳನ್ನು ಗುರುತಿಸುವುದಕ್ಕೆ ಸಾಕ್ಷ್ಯಾಧಾರಗಳ  ಕೊರತೆಯಿಂದ ಹೈಕೋರ್ಟ್ 32 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.

ಹೈಕೋರ್ಟ್ ಖುಲಾಸೆ ನೀಡಿರುವುದರಿಂದ ಸರ್ಕಾರ ಈ ಆರೋಪ ಪ್ರಶ್ನಿಸಿ ಪುನರ್ಪರಿಶೀಲನಾ ಅರ್ಜಿ ಹಾಕಬಹುದು ಅಥವಾ ನೇರವಾಗಿ  ಸುಪ್ರೀಂಕೋರ್ಟ್‌ಗೆ ಹೋಗುವ ಸಾಧ್ಯತೆಯಿದೆ.  2000 ಮಾರ್ಚ್ 12ರಂದು ಈ ಹತ್ಯಾಕಾಂಡ ಸಂಭವಿಸಿತ್ತು. 

ವೆಬ್ದುನಿಯಾವನ್ನು ಓದಿ