ಶಿವಸೇನೆ ಪುಂಡಾಟಿಕೆ ವಿರುದ್ಧ ಕನ್ನಡ ಸಂಘಟನೆಗಳ ಪ್ರತಿಭಟನೆ

ಶನಿವಾರ, 26 ಜುಲೈ 2014 (11:16 IST)
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಶಿವಸೇನೆ ಕಾರ್ಯಕರ್ತರು ಕಲ್ಲು ತೂರಿದ ಘಟನೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಪ್ರತಿಭಟನೆಗೆ ಸಜ್ಜಾಗಿವೆ. ಶಿವಸೇನೆ ಕಾರ್ಯಕರ್ತರ ವರ್ತನೆಗೆ ವ್ಯಾಪಕ ಖಂಡನೆಯನ್ನು ಅವು ವ್ಯಕ್ತಪಡಿಸಿದವು.

ಈ ಹಿನ್ನಲೆಯಲ್ಲಿ ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲಿ ವ್ಯಾಪಕ ಪ್ರತಿಭಟನೆಯನ್ನು ನಡೆಸಿದವು. ಬೆಳಗಾವಿ ಜಿಲ್ಲೆಯ ಎಳ್ಳೂರು ಗ್ರಾಮ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಸೂಚಿಸುವ ನಾಮಫಲಕವನ್ನು ಹಾಕಿದ್ದರು. ಈ ನಾಮಫಲಕವನ್ನು ಗ್ರಾಮಸ್ಥರು ತೆರವು ಮಾಡಿದ್ದರು.

ಮರಾಠಿ ನಾಮಫಲಕವನ್ನು ತೆರವು ಮಾಡಿದ್ದಕ್ಕೆ ಸಿಡಿದೆದ್ದ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಐದು ಬಸ್‌ಗಳ ಮೇಲೆ ಕಲ್ಲು ತೂರಿ, ದೊಣ್ಣೆಗಳಿಂದ ಹೊಡೆದಿದ್ದರು. ಇದರಿಂದ ಕರ್ನಾಟಕದ ಕೆಲವು ಪ್ರಯಾಣಿಕರಿಗೂ ಗಾಯಗಳಾಗಿತ್ತು. 

ವೆಬ್ದುನಿಯಾವನ್ನು ಓದಿ