ಜೈನ್ ಹೆರಿಟೇಜ್ ಶಾಲೆಯಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ

ಶುಕ್ರವಾರ, 7 ನವೆಂಬರ್ 2014 (15:09 IST)
ಜೈನ್ ಹೇರಿಟೇಜ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಶಾಲೆಯ ಮಕ್ಕಳು ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಕ್ಕೆ ಮೆರಗು ತಂದರು.
 
ಕನ್ನಡ ಮತ್ತು ಸಂಸ್ಕ್ರತಿ ಖಾತೆ ಮಾಜಿ ಸಚಿವೆ ಲೀಲಾದೇವಿ ಪ್ರಸಾದ್ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಜೈನ್ ಹೆರಿಟೇಜ್ ಶಾಲೆ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ನೀಡಿ ಬೆಳೆಸುತ್ತಿದೆ.ಶಾಲೆಯ ಮಕ್ಕಳು ಜಾನಪದ ಮತ್ತು ಸಂಸ್ಕ್ರತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸಿದರು.
ಎರಡನೇ ದಿನದಂದು ಮುಖ್ಯಅತಿಥಿಗಳಾಗಿ ಆಗಮಿಸಿದ ಹಿರಿಯ ಸಾಹಿತಿ, ಕವಿ ಸಂಕಲನಕಾರರಾದ ಡಾ.ದೊಡ್ಡರಂಗೇಗೌಡ ಮಾತನಾಡಿ, ಜೆಎಚ್‌ಎಸ್‌ ಶಾಲೆ ರಾಜ್ಯೋತ್ಸವವನ್ನು ಬಹು ಅದ್ದೂರಿಯಿಂದ ಆಚರಿಸಿರುವುದು ಸಂತೋಷ ತಂದಿದೆಯ ವಿದ್ಯಾರ್ಥಿಗಳು ತಮ್ಮ ಅಪೂರ್ವ ಪ್ರತಿಭೆಯನ್ನು ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಗೆ ಶಾಲಾ ಅಡಳಿತ ಮಂಡಳಿ ಪೋಷಿಸುತ್ತಿರುವುದಕ್ಕೆ ಅಭಿನಂಧಿಸುತ್ತೇನೆ ಎಂದರು.
 
ಕನ್ನಡಾ ರಾಜ್ಯೋತ್ವದ ಎರಡು ದಿನದ ನೃತ್ಯ, ಸಂಗೀತ, ಮತ್ತು ನಾಯಕ ಕಾರ್ಯಕ್ರಮಗಳು ಕರ್ನಾಟಕದ ಭುವನೇಶ್ವರಿ ಮಾತೆ ಕನ್ನಡಾಂಬೆಗೆ ಸಮರ್ಪಿಸಲಾಯಿತು. 
 
ರಾಜ್ಯೋತ್ವದ ಮೊದಲ ದಿನದಂದು, ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಯಕ್ಷಗಾನ ನೃತ್ಯದಲ್ಲಿ ಪಾಲ್ಗೊಂಡು ಅದ್ಭುತ ಪ್ರದರ್ಶನ ನೀಡಿ ಜನಮನಸೂರೆಗೊಂಡರು.
 
ಎರಡನೇ ದಿನದಂದು ವೇದಿಕೆಯ ಮೇಲೆ ವಿದ್ಯಾರ್ಥಿಗಳು ಜನ ಪ್ರಾಥಾ ಲೈವ್ ಮ್ಯೂಸಿಕ್‌ನ ಸಂಗೀತ ಕಾರ್ಯಕ್ರಮಕ್ಕೆ ಹೊಸ ಮೆರಗು ತಂದರು. ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತಕ್ಕೆ ಪ್ರೇಕ್ಷಕರಿಂದ ಬಾರಿ ಕರತಾಡನ ಮತ್ತು ಚಪ್ಪಾಳೆಗಳಿಂದ ಭಾರಿ ಪ್ರಂಶಸೆ ದೊರೆಯಿತು. 
 
ಕಾರ್ಯಕ್ರಮದಲ್ಲಿ ಪುಜಾ ಕುಣಿತ, ಕಂಸಾಳೆ ನೃತ್ಯ, ವೀರಗಾಸೆ ಮಕ್ಕು ಕೋಲಾಟ ಜಾನಪದ ನೃತ್ಯಗಳು ನೆರೆದಿದ್ದ ನೂರಾರು ಪ್ರೇಕ್ಷಕರನ್ನು ಆಕರ್ಷಿಸಿದವು. ಸಂಗೀತ ಮತ್ತು ನಾಟಕಗಳು ಸಮಾರಂಭಕ್ಕೆ ಮತ್ತಷ್ಟು ಕಳೆಯನ್ನು ತಂದವು. 
 

ಜೈನ್ ಹೆರಿಟೇಜ್ ಶಾಲೆಯ ಪ್ರಾಂಶುಪಾಲೆ ಅರ್ಚನಾ ವಿಶ್ವನಾಥ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಯಶಸ್ವಿಯಾಗಿ ಆಚರಿಸುವುದಕ್ಕೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮತ್ತು ಶಾಲಾ ಅಡಳಿತ ಮಂಡಳಿ ಶ್ರಮವೇ ಕಾರಣ ಎಂದ ಅವರು, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ ಇಂತಹ ಕಾರ್ಯಕ್ರಮಗಳು ದೇಶಭಕ್ತಿಯ ಮತ್ತು ವಿಶ್ವಾಸದ ಪ್ರತೀಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ಒಟ್ಟಾರೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜೈನ್ ಹೆರಿಟೇಜ್ ಶಾಲೆಗೆ ಹೆಮ್ಮೆಪಡುವ ದಿನವಾಗಿತ್ತು ಎಂದು ಪ್ರಾಂಶುಪಾಲೆ ಅರ್ಚನಾ ವಿಶ್ವನಾಥ್ ಅಭಿಪ್ರಾಯಪಟ್ಟರು. 
 

ವೆಬ್ದುನಿಯಾವನ್ನು ಓದಿ