ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.100 ರಷ್ಟು ಮೀಸಲಾತಿ: ಸಿಎಂ ಸಿದ್ದರಾಮಯ್ಯ
ಗುರುವಾರ, 22 ಡಿಸೆಂಬರ್ 2016 (15:12 IST)
ಐಟಿ ಬಿಟಿ ವಲಯ ಹೊರತುಪಡಿಸಿ ಇತರ ಉದ್ಯೋಗಳಲ್ಲಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ಕಲ್ಪಿಸಬೇಕು ಎನ್ನುವ ಕರಡು ಅಧಿಸೂಚನೆಗೆ ಸರಕಾರ ಸಿದ್ದವಾಗಿದೆ.
ನಮ್ಮ ರಾಜ್ಯದ ನೀರು, ಭೂಮಿಯನ್ನು ಬಳಸಿಕೊಳ್ಳುವ ಎಲ್ಲಾ ಕಂಪೆನಿಗಳು ಎ ಗ್ರೇಡ್ ಮತ್ತು ಬಿ ಗ್ರೇಡ್ ಹುದ್ದೆಗಳನ್ನು ಹೊರತುಪಡಿಸಿ ಸಿ ಮತ್ತು ಡಿ ಗ್ರೇಡ್ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಾತಿ ನೀಡುವುದು ಕಡ್ಡಾಯ ಎನ್ನುವ ಕಾನೂನು ಜಾರಿಗೆ ತರಲು ಸರಕಾರ ಸಿದ್ದತೆ ನಡೆಸಿದೆ.
ಐಟಿ, ಬಿಟಿ ಇಂಡಸ್ಟ್ರೀಯಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಅವುಗಳನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಕರಡು ಅವಧಿ 30 ದಿನಗಳ ನಂತರ ವಿಧಾನಸಭೆಯಲ್ಲಿ ಮಂಡಿಸಿ ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.