ಕಪಿಲ್ ಮೋಹನ್‌ಗೆ ಮತ್ತಷ್ಟು ಸಂಕಷ್ಟ: ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲು ಸಾಧ್ಯತೆ

ಬುಧವಾರ, 25 ನವೆಂಬರ್ 2015 (13:24 IST)
ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರಿಗೆ ಮತ್ತಷ್ಟು ಸಂಕಷ್ಟು ಎದುರಾಗಿದ್ದು, ಕಪಿಲ್ ಮೋಹನ್‌ಗೆ ಆಸ್ತಿ, ಪಾಸ್ತಿ ಜಫ್ತಿ ಮಾಡಿದ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯದ ಜಂಟಿ ಆಯುಕ್ತರು ಲೋಕಾಯುಕ್ತಕ್ಕೆ ಸೂಚನೆ ನೀಡಿದ್ದಾರೆ.  ಕಪಿಲ್ ಮೋಹನ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆಯ ಕೇಸ್ ದಾಖಲಿಸಲಾಗಿದ್ದು, ಅವರ ವಿರುದ್ಧ  ಎಫ್‌ಐಆರ್ ದಾಖಲು ಮಾಡುವುದಾಕ್ಕಾಗಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.

 ಈ ಹಿಂದೆ ನಗರದ ಯಶವಂತಪುರ ವ್ಯಾಪ್ತಿಯಲ್ಲಿ ಕಪಿಲ್ ಅವರು ತಂಗಿದ್ದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್‌ಮೆಂಟ್ ಮೇಲೆಸಿಐಡಿ ಅಧಿಕಾರಿಗಳು ಕಳೆದ ಆಗಸ್ಟ್ 5ರಂದು ದಾಳಿ ನಡೆಸಿದ್ದರು. ಈ ವೇಳೆ ಎರಡೂವರೆ ಕೆಜಿ ಚಿನ್ನಾಭರಣ, 42 ಸಿಡಿಗಳು, 28 ಡಿವಿಡಿ, 1 ಹಾರ್ಡ್ ಡಿಸ್ಕ್, 4.37 ಕೋಟಿ ನಗದು ಹಣ, ತೆರಿಗೆ ಪಾವತಿಗೆ ಸಂಬಂಧಿಸಿದ ಹೆಂಡತಿ ಮತ್ತು ಪತ್ನಿ ಹೆಸರಿನಲ್ಲಿದ್ದ ಕೆಲ ದಾಖಲೆಗಳು ಪತ್ತೆಯಾಗಿದ್ದವು. ಡಿವಿಡಿ, ಹಾರ್ಡ್‌ಡಿಸ್ಕ್‌ಗಳಲ್ಲಿ ಬ್ಲೂಫಿಲಂ ಪತ್ತೆಯಾಗಿದ್ದಕ್ಕೆ ಸಂಬಂಧಿಸಿದಂತೆ ಯಶವಂತಪುರ ರಾಣೆ ಪೊಲೀಸರು ಕೇಸು ದಾಖಲಿಸಿದ್ದರು. ಅನಂತರ ಪ್ರಕರಣ ಲೋಕಾಯುಕ್ತಕ್ಕೆ ವರ್ಗವಾಗಿತ್ತು. 
  
ಈ ಹಿನ್ನೆಲೆಯಲ್ಲಿ  ವಶಪಡಿಸಿಕೊಳ್ಳಲಾಗಿದ್ದ ಎಲ್ಲಾ ಸಿಡಿಗಳ ಪರಿಶೀಲನಾ ಕಾರ್ಯದಲ್ಲಿ ಲೋಕಾಯುಕ್ತ ಪೊಲೀಸರು ನಿರತರಾಗಿದ್ದರು. ಎಸ್ಪಿ ಕುಮಾರಸ್ವಾಮಿ, ರತ್ನಾಕರ್ ತಂಡ ದಾಳಿ ನಡೆಸಿತ್ತು.  ಈಗ ಬಂಧಿಸಲಾಗಿರುವ 420 ಭಾಸ್ಕರ್ ಕೂಡ ಕಪಿಲ್ ಮೋಹನ್ ಅವರಿಗೆ ಕರೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ