ನಳಿನ್ ಕುಮಾರ್ ಕಟೀಲ್ ಮೇಲೆ ಅನೈತಿಕ ಸಂಬಂಧದ ಆರೋಪ

ಬುಧವಾರ, 14 ಮೇ 2014 (10:16 IST)
ಲೋಕಸಭಾ ಚುನಾವಣೆಗೆ ಮಂಗಳೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ  ನಳಿನ್ ಕುಮಾರ್ ಕಟೀಲ್ ಅವರ ಮೇಲೆ ಮುಂಬೈ ಮೂಲದ, ಉಡುಪಿ ನಿವಾಸಿ ಉದ್ದಿಮೆದಾರರೊಬ್ಬರು, ತಮ್ಮ ಪತ್ನಿಯ ಜತೆ ಅನೈತಿಕ ಸಂಬಂಧ ಮತ್ತು ತಮ್ಮ ಮತ್ತು ತಮ್ಮ ತಾಯಿಯ ಮೇಲೆ ಜೀವ ಬೆದರಿಕೆಯ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ. 
 
ತಮ್ಮ ಪತ್ನಿ ಮತ್ತು  ನಳಿನ್ ಕುಮಾರ್ ಕಟೀಲ್ ಚಲನೆ-ವಲನೆ ಮತ್ತು  ದೂರವಾಣಿ ಕರೆಗಳನ್ನು ಪತ್ತೆದಾರರ ಸಹಾಯದಿಂದ ಟ್ರ್ಯಾಕ್ ಮಾಡಿದ್ದೇನೆ ಎಂದು ಮುಂಬೈ ಮೂಲದ ಉದ್ಯಮಿ ಸತೀಶ್ ಶೆಟ್ಟಿ ಹೇಳಿದ್ದಾರೆ. ಕಟೀಲ್ ಮತ್ತು ತಮ್ಮ ಪತ್ನಿಯ ವಿರುದ್ಧ ವಿವಾಹೇತರ ಸಂಬಂಧ, ವ್ಯಭಿಚಾರ, ಪಿತೂರಿ ಮತ್ತು ಬೆದರಿಕೆ ಆರೋಪಿಸಿ ಮಂಗಳೂರು ಪೋಲಿಸ್ ಠಾಣೆಯಲ್ಲಿ ಅವರು ಎಫ್ಐಆರ್ ದಾಖಲಿಸಿದ್ದಾರೆ.
 
ಸತೀಶ್ ಶೆಟ್ಟಿ ದೂರಿನ ಪ್ರಕಾರ,  ಐದು ವರ್ಷಗಳ ಹಿಂದೆ ಅವರ ದಾಂಪತ್ಯದಲ್ಲಿ ಸಣ್ಣ ಪ್ರಮಾಣದ ವಿರಸ ಉಂಟಾಗಿದ್ದು, ಪರಿಚಿತರಾಗಿದ್ದ ಕಟೀಲ್  ಸಮಸ್ಯೆಯನ್ನು ಬಗೆಹರಿಸುವ ಬದಲು, ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವಂತೆ ಪತ್ನಿಗೆ ಬಲವಂತ ಮಾಡಿದ್ದಾರೆ.
 
"ಅವರಿಬ್ಬರ ಚಲನ-ವಲನ ಮತ್ತು ಫೋನ್ ಕರೆಗಳನ್ನು ಟ್ರ್ಯಾಕ್ ಮಾಡಲು ಪತ್ತೆದಾರರನ್ನು ನೇಮಕ  ಮಾಡಿದ್ದೆ. ಅವರು ನಡುವೆ 300ಕ್ಕಿಂತ ಹೆಚ್ಚು  ದೂರವಾಣಿ ಕರೆಗಳ ವಿನಿಮಯವಾಗಿದೆ. ಅಲ್ಲದೇ ಅವರು ಉಡುಪಿ ಮತ್ತು ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ಒಟ್ಟಿಗೆ ಇದ್ದರು" ಎಂಬುದಕ್ಕೆ ನನ್ನ ಬಳಿ ಸಾಕ್ಷಿ  ಇದೆ ಎಂದು  ಶೆಟ್ಟಿ ಹೇಳಿದ್ದಾರೆ. 
 
ಶೆಟ್ಟಿ ಅವರ ದೂರನ್ನು ದಾಖಲಿಸಿ ಕೊಂಡಿರುವ ಪೋಲಿಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಪೊಲೀಸರು ಕ್ರಿಮಿನಲ್ ಬೆದರಿಕೆ, ಪಿತೂರಿ ಮತ್ತು  ವ್ಯಭಿಚಾರದ ಆಪಾದನೆಯ ಮೇಲೆ ನಳೀನ್ ಕುಮಾರ್ ಕಟೀಲ್, ದೂರುದಾರರ ಪತ್ನಿ ಮತ್ತು  ಸಹೋದರ ರಂಜಿತ್ ವಿರುದ್ಧ ಕೇಸ್ ಹಾಕಿದ್ದಾರೆ. 
 
ಆದರೆ ತಮ್ಮ ಪತಿ ಸತೀಶ ಶೆಟ್ಟಿಯ ಆಪಾದನೆಗಳನ್ನು ಅವರ ಪತ್ನಿ ಮತ್ತು ನಳಿನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ. "ಇದು ನನ್ನ ಮೇಲೆ ನಡೆಯುತ್ತಿರುವ ರಾಜಕೀಯ ಪಿತೂರಿ, ನನ್ನ ರಾಜಕೀಯ ಜೀವನವನ್ನು ಕೊನೆಗಾಣಿಸಲು ಸಂಚು ನಡೆಸಲಾಗುತ್ತಿದೆ. ನನಗೆ ಶೆಟ್ಟಿ ಯಾರೆಂದು ಗೊತ್ತೆ ಇಲ್ಲ" ಎಂದಿರುವ ಕಟೀಲ್ ಸತೀಶ್ ಶೆಟ್ಟಿ ವಿರುದ್ಧ ಕೌಂಟರ್ ದೂರು ಸಲ್ಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ