ಕಾರ್ತಿಕ್ ಗೌಡನಿಗೆ ಹುಡುಕಾಡುತ್ತಿರುವ ಬೆಂಗಳೂರು ಪೊಲೀಸರು

ಶುಕ್ರವಾರ, 5 ಸೆಪ್ಟಂಬರ್ 2014 (20:03 IST)
ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ತಲೆತಪ್ಪಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮೀಷನರ್ ಎಂ.ಎನ್. ರೆಡ್ಡಿ ಗುರುವಾರ ತಿಳಿಸಿದ್ದಾರೆ. ಅವರನ್ನು ಹಿಡಿಯಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಎಲ್ಲಾ ವಿಮಾನನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಲುಕ್ ಔಟ್ ನೋಟಿಸ್ ನೀಡಲಾಗಿದೆ. ಎಸಿಪಿ ಓಂಕಾರಯ್ಯ ನೇತೃತ್ವದಲ್ಲಿ ರಚಿಸಲಾದ ತಂಡ ಕಾರ್ತಿಕ್ ಗೌಡರನ್ನು ಹುಡುಕುತ್ತಿದೆ.

ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ತಮ್ಮೇಗೌಡ ಅವರ ನಿವಾಸಕ್ಕೆ ಸರ್ಚ್ ವಾರಂಟ್ ತೆಗೆದುಕೊಂಡು ಹೋಗಿ ಪೊಲೀಸರು ಶೋಧ ನಡೆಸಲಿದ್ದಾರೆ. ಕಾರ್ತಿಕ್ ತಮ್ಮೇಗೌಡ ಅವರ ಮನೆಯಲ್ಲಿ ಅಡಗಿದ್ದಾರೆಂಬ ಸುಳಿವು ಸಿಕ್ಕಿ ಸರ್ಚ್ ವಾರಂಟ್ ತೆಗೆದುಕೊಂಡು ಹೋಗಿದ್ದಾರೆ.

8ನೇ ಎಸಿಎಂಎಂ ಕೋರ್ಟ್‌ನಿಂದ ಬಂಧನದ ವಾರಂಟನ್ನು ಪೊಲೀಸರು ಪಡೆದಿದ್ದು ಅವರನ್ನು ದಸ್ತಗಿರಿ ಮಾಡಲು ವಿಶೇಷ ತಂಡ ರಚಿಸಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.ಪೊಲೀಸರ ಎದುರು ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಗೌಡ ಅವರಿಗೆ ಎರಡು ನೋಟಿಸ್ ನೀಡಿದ್ದರೂ ಅವರು ಹಾಜರಾಗಿರಲಿಲ್ಲ. ಅವರು ನೋಟಿಸ್‌ಗೆ ಲಕ್ಷ್ಯವಹಿಸದಿದ್ದರಿಂದ ನಗರ ಪೊಲೀಸರು ಬಂಧನದ ವಾರಂಟ್‌ಗೆ ಕೋರಿದ್ದರು.

ಏತನ್ಮಧ್ಯೆ, ನಗರ ಸಿವಿಲ್ ಕೋರ್ಟ್ ಶುಕ್ರವಾರಕ್ಕೆ ಪ್ರಕರಣವನ್ನು ಮುಂದೂಡಿತು.ಕಾರ್ತಿಕ ಗೌಡ ಪರವಾಗಿ ವಕೀಲ ಬಿ.ವಿ. ಆಚಾರ್ಯ ಮೂರು ಗಂಟೆಗಳಿಗೂ ಹೆಚ್ಚು ಕಾಲ ವಾದಿಸಿದರು. ಗುರುವಾರ ಅವರ ವಾದಮಂಡನೆ ಮುಗಿದಿದ್ದರಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮ ವಾದ ಮಂಡಿಸಲಿದ್ದಾರೆ.  
 

ವೆಬ್ದುನಿಯಾವನ್ನು ಓದಿ