ಚಿಕಿತ್ಸೆಗಾಗಿ ಬೆಳಗ್ಗೆ 5.30ಕ್ಕೇ ಸಿದ್ಧರಾಗುವ ಕೇಜ್ರಿವಾಲ್

ಶುಕ್ರವಾರ, 6 ಮಾರ್ಚ್ 2015 (13:31 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಂದಿನಿಂದ ಚಿಕಿತ್ಸೆ ಆರಂಭಿಸಲಾಗಿದ್ದು, ಬೆಳಗ್ಗೆ 5.30ರಿಂದ ಸಂಜೆ 8.30ರ ವರೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯೆ ಡಾ.ಬಬಿತಾ ಅವರು ತಿಳಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯೆ ಬಬಿತಾ, ಮೊದಲನೆ ಹಂತದಲ್ಲಿ ಕೇಜ್ರಿವಾಲ್ ಅವರ ರಕ್ತ ಪರೀಕ್ಷೆ ಮಾಡಿದ್ದ ನಮ್ಮ ಸಿಬ್ಬಂದಿ ಬಳಿಕ ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಇಂದಿನಿಂದ ಚಿಕಿತ್ಸೆಯನ್ನು ಆರಂಭಿಸಲಾಗಿದ್ದು, ಕೇಜ್ರಿವಾಲ್ ಅತ್ಯುತ್ತಮವಾಗಿ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ. ಚಿಕಿತ್ಸೆಯನ್ನು ಉತ್ತಮ ರೀತಿಯಲ್ಲಿ ನೀಡಲಾಗುತ್ತಿದೆ ಎಂದರು. 
 
ಬಳಿಕ ಮಾತನಾಡಿದ ಅವರು, ಚಿಕಿತ್ಸೆಯನ್ನು ಮೊದಲು ಯೋಗಾಸನ ಮತ್ತು ಪ್ರಾಣಾಯಾಮಗಳ ಮೂಲಕ ನೀಡಲಾಗುತ್ತಿದ್ದು, ಕೆಮ್ಮು ಮತ್ತು ಮದುಮೇಹ ಚಿಕಿತ್ಸೆಯನ್ನು ಶೀಘ್ರವೇ ಪ್ರಾರಂಭಿಸಲಿದ್ದೇವೆ ಎಂದರು. 
 
ಇನ್ನು ಚಿಕಿತ್ಸೆಗೆ ದಿನವೊಂದಕ್ಕೆ 30 ಸಾವಿರವನ್ನು ನಿಗಧಿಪಡಿಸಲಾಗಿದೆ ಎಂದು ತಿಳಿದು ಬಂದಿದ್ದು, ಕೇಜ್ರಿವಾಲ್ ಅವರ 10 ದಿನಗಳ ಚಿಕಿತ್ಸೆಗೆ 3 ಲಕ್ಷ ಆಗಲಿದೆ.  

ವೆಬ್ದುನಿಯಾವನ್ನು ಓದಿ