ಕೋಲಾರ: ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಕೋಟ್ಯಾಂತರ ಮೌಲ್ಯದ ಬೆಳೆನಾಶ

ಭಾನುವಾರ, 3 ಮೇ 2015 (13:31 IST)
ನಿನ್ನೆ ಸಂಜೆ ಕೋಲಾರ ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಫಸಲು ನಾಶವಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ.

ಬಯಲುಸೀಮೆ ಜಿಲ್ಲೆಯಲ್ಲಿ ಶನಿವಾರ ಸಂಜೆ ಭೀಕರವಾಗಿ ಸುರಿದ ಮಳೆಯ ಪರಿಣಾಮ ಬಂಗಾರಪೇಟೆ, ಮಾಲೂರು, ಕೋಲಾರ ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಹೆಚ್ಚಿನ ಬೆಳೆ ಹಾನಿ ಕಂಡು ಬಂದಿದೆ. ಅದರಲ್ಲೂ ಬಂಗಾರಪೇಟೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಟೊಮೆಟೋ, ಕ್ಯಾಪ್ಸಿಕಂ, ಪಪಾಯ ಮುಂತಾದ ಬೆಳೆಗಳು ಕೊಯ್ಲಿಗೆ ನಿಂತಿದ್ದು, ಸಾಲಸೋಲ ಮಾಡಿ ಬೆಳೆಯಲಾಗಿದ್ದ ಬೆಳೆ ಕೈಗೆ ಸಿಗುವಷ್ಟರಲ್ಲಿ ನಾಶವಾಗಿದ್ದು ಬಡರೈತರನ್ನು ಕಂಗೆಡಿಸಿದೆ. 
 
ಜಿಲ್ಲೆಯಾದ್ಯಂತ ಸುಮಾರು ನಾಲ್ಕೈದು ಕೋಟಿ ಬೆಲೆಬಾಳುವ ಬೆಳೆ ನಾಶವಾಗಿದೆ ಎಂದು ಊಹಿಸಲಾಗಿದೆ.
 
ಇಂದು ಮುಂಜಾನೆಯಿಂದ ಬಂಗಾರಪೇಟೆ ಶಾಸಕರು ಮತ್ತು ತಹಶೀಲ್ದಾರರರು ತಾಲ್ಲೂಕಿನಾದ್ಯಂತ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. 
 
ಮಳೆ ಬಿದ್ದು 10 ಗಂಟೆ ಕಳೆದರೂ ಹೊಲಗದ್ದೆಗಳಲ್ಲಿ ಇನ್ನುವರೆಗೂ ರಾಶಿ ರಾಶಿಯಾಗಿ ಬಿದ್ದಿರುವ ಆಲಿಕಲ್ಲುಗಳು ಮಳೆಯ ಆರ್ಭಟಕ್ಕೆಸಾಕ್ಷಿಯಾಗಿವೆ.

ವೆಬ್ದುನಿಯಾವನ್ನು ಓದಿ