ಕೆಪಿಎಸ್‌ಸಿ ನೇಮಕಾತಿ ರದ್ದು: 362 ಅಭ್ಯರ್ಥಿಗಳ ಅತಂತ್ರ ಸ್ಥಿತಿ

ಮಂಗಳವಾರ, 22 ಜುಲೈ 2014 (10:45 IST)
ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೇಕ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ನಡೆಸಿದ್ದಾರೆ.  ಕಳೆದ ನಾಲ್ಕುದಿನಗಳಿಂದ ಹತ್ತು ಮಂದಿ ಉಪವಾಸ ಆರಂಭಿಸಿದ್ದು, ನಾಲ್ಕು ಮಂದಿ ಅಸ್ವಸ್ಥರಾಗಿದ್ದಾರೆ. ಆಯ್ಕೆ ಪಟ್ಟಿಯನ್ನು ಅಂಗೀಕರಿಸಿ ನೇಮಕ ಆದೇಶವನ್ನು ನೀಡಿ ಎಂದು ಅವರು ಆಗ್ರಹಿಸಿದ್ದಾರೆ.  ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ.

 ಈ ಹಿನ್ನೆಲೆಯಲ್ಲಿ ನೇಮಕಾತಿ ರದ್ದುಮಾಡಲು ನಿರ್ಧರಿಸಿರುವುದರಿಂದ 362 ಮಂದಿಯ ಸ್ಥಿತಿ ಅತಂತ್ರವಾಗಿದೆ.  2012ರಲ್ಲಿ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಸರ್ಕಾರ ಮರುಮೌಲ್ಯಮಾಪನಕ್ಕೆ ಸೂಚಿಸಿದ್ದರೂ ಕೆಪಿಎಸ್‌ಸಿ ಮರುಮೌಲ್ಯಪಾಪನ ನಿರಾಕರಿಸಿತ್ತು. ಇದರಿಂದ ಸರ್ಕಾರ ನೇಮಕಾತಿಯನ್ನೇ ರದ್ದುಮಾಡಲು ನಿರ್ಧರಿಸಿರುವುದರಿಂದ 362 ಮಂದಿಯ ಸ್ಥಿತಿ ಅತಂತ್ರವಾಗಿದೆ.

1,35,000 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 1078 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಅವರ ಪೈಕಿ 362 ಮಂದಿ ಉತ್ತೀರ್ಣರಾಗಿದ್ದರು. ಫ್ರೀಡಂಪಾರ್ಕ್‌ನಲ್ಲಿ ಈಗ ಎರಡು ಬಣಗಳು ಪ್ರತಿಭಟನೆ ನಡೆಸುತ್ತಿವೆ. ಹುದ್ದೆ ನೀಡುವಂತೆ ಆಗ್ರಹಿಸಿ ಒಂದು ಬಣ ಪ್ರತಿಭಟನೆ ನಡೆಸುತ್ತಿದೆ. ಮತ್ತೊಂದು ಬಣನೇಮಕಾತಿ ರದ್ದುಮಾಡಲು ಆಗ್ರಹಿಸಿದೆ. . ಹೊಸದಾಗಿ ಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿದ್ದು, 362 ಮಂದಿಯನ್ನು ನೇಮಕ ಮಾಡುತ್ತಾ ಅಥವಾ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬೇಕಾಗುತ್ತಾ ಎಂದು ತೀರ್ಮಾನಿಸುವುದು ಸರ್ಕಾರಕ್ಕೆ ಸೇರಿದೆ. 

ವೆಬ್ದುನಿಯಾವನ್ನು ಓದಿ