ಕೆಪಿಎಸ್‌ಸಿ ನೇಮಕಾತಿ ರದ್ದತಿ ವಿವಾದ: ಕೋರ್ಟ್ ಮೆಟ್ಟಿಲು ಹತ್ತಲಿರುವ ಅಭ್ಯರ್ಥಿಗಳು

ಮಂಗಳವಾರ, 19 ಆಗಸ್ಟ್ 2014 (11:48 IST)
2011ರ ಕೆಪಿಎಸ್‌ಸಿ ನೇಮಕಾತಿ ರದ್ದತಿ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಪಿಎಸ್ಸಿ ಅಭ್ಯರ್ಥಿಗಳು ಇಂದು ಪ್ರತಿಭಟನೆ ಅಂತ್ಯಗೊಳಿಸಲಿದ್ದು, ಇಂದು ಅಥವಾ ನಾಳೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಸುಮಾರು 31 ದಿನಗಳಿಂದ ಕೆಪಿಎಸ್‌ಸಿ ಅಭ್ಯರ್ಥಿಗಳಿಂದ  ಉಪವಾಸ ಸತ್ಯಾಗ್ರಹ ಮುಂತಾದ ಹೋರಾಟ ಯಾವುದೇ ಫಲ ನೀಡಿಲ್ಲ. ಜೆಡಿಎಸ್ ಮುಖಂಡ ಕುಮಾರಸ್ವಾಮಿ, ವಿವಿಧ ಸಂಘ, ಸಂಸ್ಥೆಗಳು ಇವರ ಹೋರಾಟಕ್ಕೆ ಕೈಗೂಡಿಸಿದ್ದವು.

ಕೆಲವೇ ಅಭ್ಯರ್ಥಿಗಳ ತಪ್ಪಿನಿಂದಾಗಿ ಕಷ್ಟ ಪಟ್ಟು ಓದಿ ತೇರ್ಗಡೆಯಾದ ಅಭ್ಯರ್ಥಿಗಳ ಭವಿಷ್ಯವನ್ನು ಬಲಿಕೊಡಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ತಮ್ಮ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಲಿಲ್ಲವಾದ್ದರಿಂದ ನ್ಯಾಯಾಲಯದ ಮೊರೆ ಹೋಗುತ್ತಿರುವುದಾಗಿ ಅಭ್ಯರ್ಥಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ