ಕಾಂಗ್ರೆಸ್ ನಾಯಕರ ಆರೋಪಗಳಿಗೆ ಎಚ್‌ಡಿಕೆ ತಿರುಗೇಟು

ಶನಿವಾರ, 20 ಫೆಬ್ರವರಿ 2016 (18:59 IST)
ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪನಷ್ಟು ಕೀಳು ಮಟ್ಟಕ್ಕೆ ಇಳಿದು ಮಾತನಾಡಲ್ಲ, ನನ್ನ ಆಸ್ತಿಯ ಬಗ್ಗೆ ಯಾವುದೇ ಮುಚ್ಚು ಮರೆಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ಅನಾರೋಗ್ಯದ ಕಾರಣ ಮೂರು ದಿನಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದರಿಂದ, ಮೂರು ದಿನಗಳ ನಂತರ ವಿಧಾನಸಭೆಯಲ್ಲಿ ಸುದ್ದಿಗೋಷ್ಠಿ ಕಾಂಗ್ರೆಸ್ ಮುಖಂಡರ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
 
ಸಿದ್ದರಾಮಯ್ಯನವರ ಪುತ್ರನನ್ನು ನಾನು ಯಾವತ್ತೂ ಪ್ರಶ್ನೆ ಮಾಡಿಲ್ಲ. ನನ್ನ ಮನೆಯ ಬಾಗಿಲನ್ನು ತೆರೆದಿಡುತ್ತೇನೆ.ಕಾಂಗ್ರೆಸ್ ಮುಖಂಡರು ಬಂದು ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.
 
ನೇರವಾಗಿ ಎಲ್ಲಾ ಆರೋಪಗಳಿಗೆ ಉತ್ರ ನೀಡುತ್ತೇನೆ. ನನ್ನ ಬಳಿಯಿರುವ ಕಾರುಗಳು ಮತ್ತು ವಾಚ್‌ಗಳ ಬಗ್ಗೆ ಲೆಕ್ಕ ಹಾಕಿಕೊಳ್ಳಲಿ. ಉಗ್ರಪ್ಪ ಮತ್ತು ರೇವಣ್ಣ ಸಿಎಂ ಸಿದ್ದರಾಮಯ್ಯನವರ ಧ್ವನಿಪೆಟ್ಟಿಗೆಯಿದ್ದಂತೆ ಎಂದು ಲೇವಡಿ ಮಾಡಿದ್ದಾರೆ.
 
ನನ್ನ ಪುತ್ರ ನಿಖಿಲ್ ಕುಮಾರ್ ಜನಪ್ರತಿನಿಧಿಯಲ್ಲ. ಅವನು 50 ಕೋಟಿ ಬೆಲೆಬಾಳುವ ಕಾರನ್ನಾದರೂ ತೆಗೆದುಕೊಳ್ಳುತ್ತಾನೆ, 100 ಕೋಟಿ ಬೆಲೆಬಾಳುವ ಕಾರನ್ನಾದರೂ ತೆಗೆದುಕೊಳ್ಳುತ್ತಾನೆ ಅದು ಅವನ ಹಕ್ಕು ಎಂದಿದ್ದಾರೆ.  
 
ಕಾಂಗ್ರೆಸ್ ಮುಖಂಡರು ನನ್ನ ವಿರುದ್ಧ ಆರೋಪ ಮಾಡುವುದು ಬಿಟ್ಟು ಸಿಎಂ ವಾಚ್ ಮೂಲವನ್ನು ಯಾಕೆ ಬಹಿರಂಗಪಡಿಸಲಿ. ಯಾಕೆ ವಾಚ್ ಮೂಲವನ್ನು ಬಹಿರಂಗಪಡಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ನನ್ನ ಎಲ್ಲಾ ವ್ಯವಹಾರಗಳನ್ನು ನೇರವಾಗಿ ಮಾಡಿದ್ದೇನೆ. ಕದ್ದು ಮುಚ್ಚಿ ಮಾಡಿಲ್ಲ. ಆದ್ದರಿಂದ ಭಯಬಿದ್ದು ಓಡಿಹೋಗಲ್ಲ, ಬಾಯಿ ಮುಚ್ಚಿಸಿಕೊಂಡು ಹೋಗುವುದಿಲ್ಲ. ಇಂತಹ ಆರೋಪಗಳಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಆರೋಪಗಳಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ