ಸಾಲ ಮಾಡಿ ಚುನಾವಣೆ ಎದುರಿಸುವ ಸ್ಥಿತಿ ನಮಗೆ ಬಂದಿದೆ: ಕುಮಾರಸ್ವಾಮಿ

ಶುಕ್ರವಾರ, 17 ಫೆಬ್ರವರಿ 2017 (13:44 IST)
ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣದ ಪ್ರಭಾವದಿಂದ ಪ್ರಚಾರ ನಡೆಸುತ್ತಿವೆ. ಆದರೆ, ನಮಗೆ ಸಾಲ ಮಾಡಿ ಚುನಾವಣೆ ಎದುರಿಸುವ ಸ್ಥಿತಿ ಎದುರಾಗಿದೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ಇದೇನು ತುಘಲಕ್ ಸರಕಾರವೋ ಅಥವಾ ಸದ್ದಾಂ ಸರಕಾರವೋ? ಶಿಕ್ಷಣ ವ್ಯವಸ್ಥೆ ಸರಿಪಡಿಸಿ ಎಂದು ಶಿಕ್ಷೆ ಕೊಡುತ್ತೇನೆ ಎಂದು ಸರಕಾರ ಹೇಳುತ್ತಿದೆ. ಅರ್ಹರಲ್ಲದವರಿಗೆ ಶಿಕ್ಷಣ ಖಾತೆ ನೀಡಿದರೆ ಅವ್ಯವಸ್ಥೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸಂದಿಗ್ಧ ಸ್ಥಿತಿ ಎದುರಾಗಿದೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯಪಡೆದು ಮುಂದುವರೆಯುತ್ತೇನೆ ಎಂದು ತಿಳಿಸಿದ್ದಾರೆ.
 
ಕಳಲೇ ಕೇಶವಮೂರ್ತಿ ನನ್ನನಾಗಲಿ ಅಥವಾ ದೇವೇಗೌಡರನ್ನಾಗಲಿ ಕೇಳಿ ಪಕ್ಷ ಬಿಟ್ಟಿಲ್ಲ. ಆದರೆ, ನನ್ನ ಮತ್ತು ತಂದೆಯವರ ಹೆಸರು ತೆಗೆದುಕೊಂಡಿರುವುದಕ್ಕೆ ಬೇಸರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ನಂಜನಗೂಡಿನಲ್ಲಿ ರಾಷ್ಟ್ರೀಯ ಪಕ್ಷಗಳ ಮಧ್ಯೆ ಕೆಸರೆರಚಾಟ ಆರಂಭವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಿಂದ ಮಾಡಿದ್ದ ದುಡ್ಡಿನಿಂದ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿವೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ