ರಾಜ್ಯದಲ್ಲಿ ವೈದ್ಯರ ಕೊರತೆ: ಶೀಘ್ರವೇ ವೈದ್ಯರ ನೇಮಕಾತಿ ಎಂದ ಸಚಿವ ಖಾದರ್

ಶನಿವಾರ, 4 ಜುಲೈ 2015 (12:32 IST)
ರಾಜ್ಯದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಸರ್ಕಾರ ಸಿದ್ಧವಿದ್ದು ಶೀಘ್ರದಲ್ಲಿಯೇ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಇಂದು ತಿಳಿಸಿದ್ದಾರೆ. 
 
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಇದರಿಂದ ರೋಗಿಗಳ ಆರೋಗ್ಯ ತಪಾಸಣೆಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಶೀಘ್ರದಲ್ಲಿಯೇ ಇಲಾಖೆಗೆ ನೇಮಕಾತಿ ನಡೆಯಲಿದ್ದು, 963 ಮಂದಿ ತಜ್ಞ ವೈದ್ಯರು, 360 ಸಾಮಾನ್ಯ ವೈದ್ಯರು, 82 ಮಂದಿ ದಂತ ವೈದ್ಯರು ಹಾಗೂ 3500 ಮಂದಿ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. 
 
ಇದೇ ವೇಳೆ, ಜಿಲ್ಲೆಯ ಜಿಲ್ಲಾಸ್ಪತ್ರೆಯನ್ನು ಮತ್ತೆ ಆರೋಗ್ಯ ಇಲಾಖೆ ವಶಕ್ಕೆ ಪಡೆಯುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, 2016ರ ಏಪ್ರಿಲ್ ತಿಂಗಳ ಒಳಗೆ ವಶಕ್ಕೆ ಪಡೆಯಲಾಗುತ್ತದೆ ಎಂದರು. 
 
ಇನ್ನು ಈ ಆಸ್ಪತ್ರೆಯನ್ನು ಈ ಹಿಂದೆಯೇ ಇಲಾಖೆ ವಶಕ್ಕೆ ಪಡೆಯಲಾಗಿತ್ತು. ಆದರೆ ಬಳಿಕ ಕೈ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯು ಪ್ರಸ್ತುತ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿದ್ದು, ಕಾರ್ಯ ನಿರ್ವಹಿಸುತ್ತಿದೆ. 

ವೆಬ್ದುನಿಯಾವನ್ನು ಓದಿ