ಶೆಟ್ಟರ್ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ: ಆತ್ಮಹತ್ಯೆಗೆ ಯತ್ನ

ಶುಕ್ರವಾರ, 30 ಅಕ್ಟೋಬರ್ 2015 (16:39 IST)
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಅವರ ಸಹೋದರ ಪ್ರದೀಪ್ ಶೆಟ್ಟರ್ ಇಬ್ಬರೂ ಸೇರಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ತಾಯಿ ಮತ್ತು ಮಗ ಇಬ್ಬರು  ನಗರದ ತಹಶಿಲ್ದಾರ್ ಕಚೇರಿ ಎದುರು ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 
 
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗಳನ್ನು ತಾಯಿ ಸಯೀದಾ ಅಲ್ಲಾವರಿ ಶೇಖ್ ಮತ್ತು ಅವರ ಪುತ್ರ ಜಾಫರ್ ಶೇಖ್ ಎಂದು ತಿಳಿದು ಬಂದಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಅವರ ಕುಟುಂಬದವರ ವಿರುದ್ಧ ಭೂಕಬಳಿಕೆಯ ಆರೋಪ ಮಾಡಿದ್ದಾರೆ. 
 
ಏನಿದು ಪ್ರಕರಣ: ನಮ್ಮ ಜಮೀನು ಈ ಹಿಂದೆ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಆ ವಿವಾದವನ್ನು ಬಗೆಹರಿಸಿಕೊಡುವಂತೆ ಪ್ರದೀಪ್ ಶೆಟ್ಟರ್ ಅವರ ಮೊರೆ ಹೋಗಲಾಗಿತ್ತು. ಈ ವೇಳೆ ಶೆಚ್ಚರ್ 9 ಲಕ್ಷ ಙಣ ಕೇಳಿದ್ದರು. ಅದನ್ನು ಕೊಟ್ಟಿದ್ದೆವು. ಬಳಿಕ ಹಣವನ್ನೂ ವಾಪಾಸ್ ನೀಡಿದ್ದರು. ಆದರೆ ಹಣವನ್ನು ವಾಪಾಸ್ ಪಡೆದಿದ್ದೇವೆ ಎಂದು ದಾಖಲೆಗಾಗಿ ನೀವು ಸಹಿ ಹಾಕಿ ಎಂದು ನಮ್ಮ ಕುಟುಂಬದ ಎಲ್ಲಾ ಸದಸ್ಯರಿಂದ ಪ್ರದೀಪ್ ಶೆಟ್ಟರ್ ಸಹಿ ಹಾಕಿಸಿಕೊಂಡಿದ್ದಾರೆ. ಆದರೆ ಅದೇ ಹಾಲೆಯನ್ನು ಭೂ ಕಬಳಿಕೆಗೆ ಬಳಸಿಕೊಳ್ಲುವ ಮೂಲಕ ನಮಗೆ ಮೋಸ ಮಾಡಿದ್ದಾರೆ ಎಂಬುದಾಗಿ ಸಯೀದಾ ಆರೋಪಿಸಿದ್ದಾರೆ.
 
ಈ ಸಂಬಂಧ ದೂರು ನೀಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದ ಜಾಫರ್ ಶೇಖ್, ನಮ್ಮ ಜಮೀನು ತಾರಿಹಾಳ ಗ್ರಾಮಕ್ಕೆ ಸೇರಿದ್ದಾಗಿದ್ದು, ಸ.ನಂ. 106ರಲ್ಲಿ ಒಟ್ಟು 9.14ಗುಂಟೆ ಜಮೀನಿದೆ. ಇದು ಈ ಹಿಂದೆ ನಮ್ಮ ತಾತ ಬಕ್ಸಾರ್ ಸಾಬ್ ಹೆಸರಿನಲ್ಲಿತ್ತು. ಇದು ಪ್ರಸ್ತುತ ಅವರ 9 ಮಕ್ಕಳಿಗೆ ಹಂಚಿಕೆಯಾಗಬೇಕಿತ್ತು. ಆದರೆ ಮೋಸ ಮಾಡಿದ್ದಾರೆ. ಪ್ರಸ್ತುತ ಇದೇ ಜಮೀನು ಹರ್ಷಾ ಹಾಗೂ ಈರಣ್ಣ ಚೌಡಿ ಎಂಬ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿದ್ದು, ಜಂಟಿ ಮಾಲಿಕತ್ವದಲ್ಲಿದೆ. 
 
ಇನ್ನು ದೂರು ದಾಖಲಿಸಲು ತೆರಳಿದ್ದನ್ನು ತಿಳಿದ ಶೆಟ್ಟರ್ ಬೆಂಬಲಿಗರು, ದೂರುದಾರರಿಗೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್‌ವೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ.   

ವೆಬ್ದುನಿಯಾವನ್ನು ಓದಿ