ರಾಜಕೀಯ ಜೀವನಕ್ಕೆ ಮಸಿ ಬಳೆಯಲು ಷಡ್ಯಂತ್ರ: ಮೋಟಮ್ಮ

ಬುಧವಾರ, 8 ಮಾರ್ಚ್ 2017 (19:33 IST)
ಭೂಮಿ ಹಂಚಿಕೆ ಕುರಿತಂತೆ ತಹಶೀಲ್ದಾರ್‌ಗೆ ಬೆದರಿಕೆ ಹಾಕಿದ್ದೇನೆ ಎನ್ನುವ ಆರೋಪದಲ್ಲಿ ಸತ್ಯಾಂಶವಿಲ್ಲ. ನನ್ನ ರಾಜಕೀಯ ಜೀವನಕ್ಕೆ ಮಸಿ ಬಳೆಯುವ ಷಡ್ಯಂತ್ರ ನಡೆದಿದೆ ಎಂದು ಕಾಂಗ್ರೆಸ್ ಶಾಸಕಿ ಮೋಟಮ್ಮ ಹೇಳಿದ್ದಾರೆ.
 
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮೋಟಮ್ಮ, 1981ರಲ್ಲಿ ಚಿಕ್ಕಮಗಳೂರು ಡಿಸಿಯಾಗಿದ್ದ ಮಹಿಷಿಯವರು ನನಗೆ ಮೂಡಿಗೆರೆ ಜಿಲ್ಲೆಯ ಕಂದೂರ್‌ನಲ್ಲಿರುವ ಸರ್ವೆ ನಂಬರ್ 156ರಲ್ಲಿ 20 ಎಕರೆ ಭೂಮಿಯನ್ನು ಮಂಜೂರು ನೀಡಿದ್ದರು. ಒತ್ತುವರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಎಸ್.ಆರ್.ಹಿರೇಮಠ್ ಅವರಿಗೆ ನಾನು ಯಾವುದೇ ದಾಖಲೆ ನೀಡಿಲ್ಲ. ನಡೆದ ಘಟನೆಯ ಬಗ್ಗೆ ಮಾಹಿತಿ ಕೂಡಾ ನೀಡಿಲ್ಲ. ಅಗತ್ಯವಾದಲ್ಲಿ ಧರ್ಮಸ್ಥಳದಲ್ಲಿ ಆಣೆಪ್ರಮಾಣಕ್ಕೂ ಸಿದ್ದ ಎಂದು ತಹಶೀಲ್ದಾರ್ ನಾಗೇಶ್, ಮೋಟಮ್ಮ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.
 
ಸರ್ವೆ ನಂಬರ್ 156ರಲ್ಲಿ ಶಾಸಕಿ ಮೋಟಮ್ಮ 15 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿರುವ ಬಗ್ಗೆ ಅವರ ತೋಟದ ಮನೆಗೆ ನೋಟಿಸ್ ಕಳುಹಿಸಿದ್ದೇನೆ. ಆದರೆ ಅವರು ಯಾವುದೇ ನೋಟಿಸ್ ತಮಗೆ ತಲುಪಿಲ್ಲ ಎಂದು ಹೇಳುತ್ತಿರುವುದಾಗಿ ತಹಶೀಲ್ದಾರ್ ನಾಗೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ