ಬೆಂಗಳೂರು ನಗರದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 9 ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ವೈಜಾರಿಕತೆ ಮೂಡಿಸಲು ಶೋಷಣೆ ಮಾಡಿಯೇ ಜೀವಿಸುವ ಪಟ್ಟಬದ್ರ ಹಿತಾಸಕ್ತಿಗಳು ಅಡ್ಡಿಪಡಿಸುತ್ತಿವೆ ಎಂದು ಕಿಡಿಕಾರಿದರು.
ಇದು ಡಿಜಿಟಲ್ ಯುಗವಾಗಿದ್ದು, ಆಧುನಿಕ ಯುಗದಲ್ಲಿಯೂ ಅಂಧಶ್ರದ್ಧೆ, ಮೂಢನಂಬಿಕೆಯನ್ನು ಪೋಷಿಸುತ್ತಿರುವುದು ಸರಿಯಲ್ಲ. ಮಾಧ್ಯಮಗಳ ಸಹ ಮೂಢನಂಬಿಕೆ ಒತ್ತು ನೀಡುತ್ತಿವೆ. ಪ್ರತಿದಿನ ಮುಂಜಾನೆ 2 ಗಂಟೆಗಳ ಕಾಲ ಜ್ಯೋತಿಷ್ಯದ ಪ್ರಸಾರ ನಡೆಯುತ್ತಿದೆ. ಮಾಧ್ಯಮಗಳು ಇದನ್ನು ಸ್ವಪ್ರೇರಣೆಯಿಂದ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.