ಮಹಿಳೆಯರು ರಾತ್ರಿ ಪಾಳಿ ಮಾಡುವುದು ಬೇಡವೆಂದ ಶಾಸಕರ ಸಮಿತಿ!

ಗುರುವಾರ, 30 ಮಾರ್ಚ್ 2017 (11:06 IST)
ಬೆಂಗಳೂರು: ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಬೇಡ. ಖಾಸಗಿ ಕಂಪನಿಗಳು, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರ ಮೇಲೆ ನಿರ್ಬಂಧ ಹೇರಬೇಕು ಎಂದು ಶಾಸಕರ ಸಮಿತಿ ಹೇಳಿದೆ.

 

ಎನ್ ಎ ಹ್ಯಾರಿಸ್ ನೇತೃತ್ವದ ಶಾಸಕರ ಸಮಿತಿ ಈ ಪ್ರಸ್ತಾಪವಿಟ್ಟಿದೆ. ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡುವುದರಿಂದ ಅವರಿಗೆ ಕುಟುಂಬದ ಕಡೆಗೆ ಗಮನ ಕೊಡಲಾಗುವುದಿಲ್ಲ. ರಾತ್ರಿ ಸಂದರ್ಭದಲ್ಲಿ ಅವರಿಗೆ ಮನೆ, ಮಕ್ಕಳು ಎಂದು ಜವಾಬ್ದಾರಿಗಳಿರುತ್ತವೆ. ಹಾಗಾಗಿ ಅವರಿಗೆ ರಾತ್ರಿ ಪಾಳಿ ನೀಡಬಾರದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

 
ಆದರೆ ಮಹಿಳಾ ಪರ ಕಾರ್ಯಕರ್ತರು ವಿರೋಧಿಸಿದ್ದಾರೆ. ಇದು ಮಹಿಳೆಯರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತೆ. ಅಲ್ಲದೆ, ಇದರಿಂದ ಮಹಿಳೆಯರಿಗೆ ಸಾಕಷ್ಟು ಅವಕಾಶ ಕಡಿಮೆಯಾಗುತ್ತದೆ ಎನ್ನುವುದು ಮಹಿಳಾಪರ ಸಂಘಟನೆಗಳ ವಾದ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ