ಡಿಸಿಎಂ ಹುದ್ದೆ ನೀಡೋದಾದ್ರೆ ನೀಡ್ಲಿ, ಬೇರೆ ಹುದ್ದೆ ಬೇಡ: ಪರಮೇಶ್ವರ್

ಸೋಮವಾರ, 22 ಸೆಪ್ಟಂಬರ್ 2014 (19:28 IST)
ಡಿಸಿಎಂ ಹುದ್ದೆ ನೀಡುವುದಾದರೆ ನೀಡಲಿ, ಡಿಸಿಎಂ ಹುದ್ದೆ ಬಿಟ್ಟು ತಾವು ಬೇರಾವುದೇ ಹುದ್ದೆಯನ್ನು ಅಲಂಕರಿಸುವುದಿಲ್ಲ. ಈ ಕುರಿತು ತಾವು ಹೈಕಮಾಂಡ್‌ಗೆ ಬೇಡಿಕೆ ಇಟ್ಟಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಜಿ. ಪರಮೇಶ್ವರ್ ಹೇಳಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬರುವುದನ್ನು ಸ್ವಾಗತಿಸುತ್ತೇನೆ.

ಸಿಎಂ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಪರಮೇಶ್ವರ್ ಹೇಳಿದರು. ಪರಮೇಶ್ವರ್ ಅವರು ಇದಕ್ಕೆ ಮುಂಚೆ ತಾವು ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಹೇಳಿದ್ದರು. ಡಿಸಿಎಂ ಹುದ್ದೆ ನೀಡದಿದ್ದರೂ ಪರವಾಗಿಲ್ಲ.

ಸಚಿವ ಹುದ್ದೆಯನ್ನು ನೀಡಿ ಎಂದು ಪರಮೇಶ್ವರ್  ಕೇಳಿದ್ದರು. ಈಗ ದಿಢೀರನೇ ಪ್ಲೇಟ್ ಬದಲಾಯಿಸಿ ಡಿಸಿಎಂ ಹುದ್ದೆ ಕೊಡುವುದಾದರೆ ಕೊಡಿ ಇಲ್ಲದಿದ್ರೆ ನಿಮ್ಮ ಯಾವುದೇ ಹುದ್ದೆಯೂ ಬೇಡ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ