ಲಿಂಗರಾಜು ಹತ್ಯೆ ಪ್ರಕರಣ: ಎಸ್ಪಿಪಿಯಿಂದ ಆಕ್ಷೇಪಣಾ ಅರ್ಜಿ ಸಲ್ಲಿಕೆ

ಗುರುವಾರ, 30 ಜುಲೈ 2015 (16:37 IST)
ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ನ್ಯಾಯಲಯವು ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ಎಸ್‌ಪಿಪಿ ಸದಾಶಿವ ಮೂರ್ತಿ ಅವರು ನ್ಯಾಯಾಲಯಕ್ಕೆ ಇಂದು ಆಕ್ಷೇಪಣಾ ಅರ್ಜಿ ಸಲ್ಲಿದ್ದಾರೆ. 
 
ಪ್ರಕರಣದ ಪ್ರಮುಖ ಆರೋಪಿ ಗೋವಿಂದರಾಜುನನ್ನು ಬಂಧಿಸಲಾಗಿತ್ತು. ಆದರೆ ಈ ನಡವೆ ವಿಚಾರಣೆ ನಡೆಸಿದ್ದ ನ್ಯಾ.ನಾರಾಯಣಸ್ವಾಮಿ ಅವರಿದ್ದ ಏಕ ಸದಸ್ಯ ಪೀಠ, ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆದರೆ ಇದರಿಂದ ಪ್ರಕರಣದ ಎಸ್‌ಪಿಪಿ ಸದಾಶಿವಮೂರ್ತಿ ಅವರು ಎಸ್‌ಪಿಪಿಯಾಗಿರುವ ನನ್ನ ಅಭಿಪ್ರಾಯವನ್ನು ಕೇಳದೆ ನ್ಯಾಯಾಧೀಶರು ನಿರ್ಧಾರದ ತೆಗೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದು, ಜಾಮೀನಿಗೆ ತಡೆ ನೀಡುವಂತೆ ಕೋರಿ ಇಂದು ಮತ್ತೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದರು. 
 
ಆರೋಪಿ ಗೋವಿಂದರಾಜು, ಲಿಂಗರಾಜು ಕೊಲೆಗೆ ರೂ 7 ಲಕ್ಷಕ್ಕೆ ಸುಪಾರಿ ಒಪ್ಪಿಸಿದ್ದ. ಈ ಹಿನ್ನೆಲೆಯಲ್ಲಿ ಸುಪಾರಿ ಹಂತಕರು 2012ರ ನ.20ರಂದು ವಿಠ್ಠಲನಗರದಲ್ಲಿ ಲಿಂಗರಾಜು ಅವರ ಮನೆಯ ಸಮೀಪವೇ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಹೈಕೋರ್ಟ್ ವಿಭಾಗೀಯ ಪೀಠವು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿತ್ತು. ಅಲ್ಲದೆ 12 ಮಂದಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನೂ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 
 
ಮೃತ ಲಿಂಗರಾಜು, ಗೋವಿಂದರಾಜು ಅವರ ಪತ್ನಿ ನಗರದ ಆಜಾದ್ ನಗರದ ಮಾಜಿ ಕಾರ್ಪೊರೇಟರ್ ಆಗಿದ್ದು, ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಲಿಂಗರಾಜುವನ್ನು ಕೊಲ್ಲಲು ಗೋವಿಂದರಾಜು ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ