ರುದ್ರೇಶ ಕೊಲೆ ಹಿಂದೆ ಮುಸ್ಲಿಂ ಮುಖಂಡರ ಕೈವಾಡ?

ಶನಿವಾರ, 29 ಅಕ್ಟೋಬರ್ 2016 (18:32 IST)
ಬೆಂಗಳೂರು:  ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಒಮ್ಮಿಂದೊಮ್ಮೆಲೆ ಟ್ವಿಸ್ಟ್ ಪಡೆದುಕೊಂಡಿದ್ದು, ಆತನ ಕೊಲೆಯ ಹಿಂದೆ ಕೆಲವು ಸ್ಥಳೀಯ ಮುಸ್ಲಿಂ ಮುಖಂಡರ ಕೈವಾಡವಿರುವುದು ಬಹಿರಂಗಗೊಂಡಿದೆ.
 
ಇಬ್ಬರು ಆರೋಪಿಗಳನ್ನು ವಶಪಡಿದುಕೊಂಡಿದ್ದ ಪೊಲೀಸರು  ವಿಚಾರಣೆಗೆ ಒಳಪಡಿಸಿದಾಗ ಈ ವಿಷಯ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಕೆಲವು ಸ್ಥಳೀಯ ಮುಸ್ಲಿಂ ಮುಖಂಡರು ರುದ್ರೇಶನ ಕೊಲೆಗೈಯ್ಯಲು ಆರೋಪಿಗಳಿಗೆ ಹಣಕಾಸಿನ ನೆರವು ಮಾಡಿ ಕೇರಳದಲ್ಲಿ ತರಬೇತಿ ಕೊಡಿಸಿದ್ದರು. ಅಲ್ಲಿಂದ ತರಬೇತಿ ಪಡೆದುಕೊಂಡ ಬಂದ ಆರೋಪಿಗಳು ನವರಾತ್ರಿ ಸಮಯ ನೋಡಿ ರುದ್ರೇಶರನ್ನು ಹತ್ಯೆಗೈಯ್ಟ್ರೈನಿಂಗ್ ಪಡೆಯೋಕೆ ಅವಕಾಶ ಮಾಡಿಕೊಟ್ಟಿದ್ದರು ಎನ್ನುವ ವಿಚಾರ ಈಗು ಪರಾರಿಯಾಗಿದ್ದರು ಎನ್ನುವುದು ಬಹಿರಂಗಗೊಂಡಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಒಂದೊಂದೆ ವಿಚಾರವನ್ನು ಬಾಯ್ಬಿಡುತ್ತಿದ್ದಾರೆ. ಹತ್ಯೆಗೆ ಒಳಗಾದ ರುದ್ರೇಶ್ ಮುಂಬರುವ ಬೆಂಗಳುರು ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದರು. ಸಂಬಂಧಿಸಿ ತನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಜನರ ವಿಶ್ವಾಸ ಗಳಿಸಿಕೊಂಡಿದ್ದರು. ಇದು ಕೆಲವು ಸ್ಥಳೀಯ ಮುಖಂಡರಿಗೆ ಸಹಿಸಲಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ರುದ್ರೇಶರನ್ನು ಕೊಲೆ ಮಾಡುವ ಸಂಚು ರೂಪಿಸಿ, ಹಂತಕರ ಸಹಾಯದಿಂದ ಹತ್ಯೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
 
ಆರ್‍ಎಸ್‍ಎಸ್ ಕಾರ್ಯಕರ್ತರು ನವರಾತ್ರಿ ಹಿನ್ನೆಲೆಯಲ್ಲಿ ಅಕ್ಟೋಬರ್ 16 ರಂದು ಮುಂಜಾನೆ ಶಿವಾಜಿನಗರ, ಭಾರತೀನಗರ ಸುತ್ತಮುತ್ತಲ ರಸ್ತೆಗಳಲ್ಲಿ ಪಥಸಂಚಲನ ಮಾಡಿದ್ದರು. ಪಂಥಸಂಚಲನ ಮುಗಿದ ಬಳಿಕ ಸುಮಾರು 11.30ರ ವೇಳೆ ಬೆಳಗ್ಗೆ 11.30ರ ಸುಮಾರಿಗೆ ರುದ್ರೇಶ್ ಅವರು ಸ್ನೇಹಿತರಾದ ಜಯರಾಂ, ಕುಮಾರ್ ಹಾಗೂ ಹರೀಶ್ ಅವರ ಜತೆ ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ಮಾತನಾಡುತ್ತ ನಿಂತಿದ್ದಾಗ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ