ಕೊಠಡಿಗೆ ಬೀಗ ಹಾಕಿ ಕಾರ್ಯ ನಿರ್ವಹಣೆ: ದೂರು ಬಂದಲ್ಲಿ ಪರಿಶೀಲಿಸುವೆ ಎಂದ ನ್ಯಾ.ಕೆಂಪಣ್ಣ

ಬುಧವಾರ, 28 ಜನವರಿ 2015 (13:37 IST)
ಬಿಡಿಎ ಅಧಿಕಾರಿಗಳು ದಾಖಲೆಗಳಿದ್ದ ಕೊಠಡಿಗೆ ಬೀಗ ಹಾಕಿ ಕಾರ್ಯ ನಿರ್ವಹಿಸುತ್ತಿದ್ದ ಬಗ್ಗೆ ದೂರು ನೀಡಿದಲ್ಲಿ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು ಪರಿಶೀಲಿಸುತ್ತೇನೆ ಎಂದು ನ್ಯಾ.ಕೆಂಪಣ್ಣ ತಿಳಿಸಿದ್ದಾರೆ. 
 
ನ್ಯಾ.ಕೆಂಪಣ್ಣ ಸಮಿತಿಯನ್ನು ಅರ್ಕಾವತಿ ಡಿ ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕಡಗಳೊಂದಿಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯನವರೇ ನೇಮಿಸಿದ ಸಮಿತಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನ್ಯಾ. ಕೆಂಪಣ್ಣನವರು, ನಮಗೆ ಇಲ್ಲಿಯವರೆಗೂ ದೂರು ಬಂದಿಲ್ಲ. ಒಂದು ವೇಳೆ ಯಾರಾದರೂ ದೂರು ನೀಡಿದಲ್ಲಿ ನಾನೇ ಖುದ್ದು ತನಿಖೆ ನಡೆಸಿ ಪರಿಶೀಲಿಸಲಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
 
ಇನ್ನು ಅರ್ಕಾವತಿ ಡಿ ನೋಟಿಫಿಕೇಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಜನವರಿ ಅಂತ್ಯದ ವೇಳೆಗೆ ಪರಿಶೀಲನೆ ಹಾಗೂ ತನಿಖೆಗೆ ಅಗತ್ಯವಾದ ಎಲ್ಲಾ ಕಡತಗಳನ್ನು ಆದಷ್ಟು ಬೇಗ ಸಮಿತಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  

ವೆಬ್ದುನಿಯಾವನ್ನು ಓದಿ