ನಾಳೆ ಎಂಟುಗಂಟೆಗೆ ಲೋಕಸಭೆ ಚುನಾವಣೆಯ ಮತಎಣಿಕೆ ಷುರು

ಗುರುವಾರ, 15 ಮೇ 2014 (20:05 IST)
ಬೆಂಗಳೂರು: ನಾಳೆ ಲೋಕಸಭೆ  ಚುನಾವಣೆ ಮತಎಣಿಕೆ ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಷುರುವಾಗಲಿದೆ. ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದ್ದು, ಮತದಾರರು  ಮಹಾಕದನದ ಫಲಿತಾಂಶ ಏನಾಗುತ್ತದೆಂದು ಕುತೂಹಲದಿಂದ ಕಾದಿದ್ದಾರೆ. ನಾಳೆ ವಿವಿಧ ರಾಜ್ಯಗಳ ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆಂಬ ಕುತೂಹಲ ಎಲ್ಲರಲ್ಲೂ ಇದೆ. 
 
ಲೋಕಸಭಾ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ನಾಳೆ ಮಧ್ಯಾಹ್ನ 2 ಗಂಟೆ ವೇಳೆಗೆ ಸಿಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 8ಗಂಟೆಗೆ ಮತಎಣಿಕೆ ವಿವಿಧ ಕೇಂದ್ರಗಳಲ್ಲಿ ಆರಂಭವಾಗಲಿದೆ. ಮುಂಚಿನ ಅರ್ಧ ಗಂಟೆ ಅಂಚೆ ಮತಗಳ ಎಣಿಕೆ ನಡೆಯಲಿದ್ದು, ನಂತರ ಮತಯಂತ್ರಗಳಲ್ಲಿರುವ ಮತ ಎಣಿಕೆ ಶುರುವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹೀಗಾಗಿ ಸುಮಾರು 11 ಗಂಟೆಗೆ ಮತದಾರ ಯಾವ ಪಕ್ಷದತ್ತ ಒಲಿದಿದ್ದಾರೆ ಎಂಬ ಸ್ಪಷ್ಟ ಚಿತ್ರಣ ತಿಳಿಯುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಇರಿಸಲಾಗಿದ್ದು,  ಎಣಿಕೆ ಕೇಂದ್ರಗಳಲ್ಲಿ  ಮತಯಂತ್ರಗಳನ್ನು  ಜೋಡಿಸಿದ ನಂತರ   ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು  ಅನಿಲ್‌ಕುಮಾರ್ ವಿವರಿಸಿದರು. ಎಣಿಕೆ ಕಾಲದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸರು ಕ್ರಮ ವಹಿಸಲಿದ್ದು, ಇದಕ್ಕಾಗಿ ಸಲಕ ಸಿದ್ಧತೆಯೂ ನಡೆದಿದೆ. ಫಲಿತಾಂಶದ ಕ್ಷಣಕ್ಷಣದ ವಿವರ ಲಭ್ಯವಾಗುವಂತೆ ವಾರ್ತಾ ಇಲಾಖೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ಸಿಗುವಂತೆಯೂ ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ