'ಲೋಕಾ' ಭ್ರಷ್ಟಾಚಾರ ಪ್ರಕರಣ: 42 ನಿಮಿಷ ಸಂಭಾಷಣೆ ಇರುವ ಆಡಿಯೋ ಕ್ಲಿಪ್ ಬಹಿರಂಗ

ಗುರುವಾರ, 23 ಜುಲೈ 2015 (13:43 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯ ಮುಖ್ಯ ನ್ಯಾ.ವೈ.ಭಾಸ್ಕರ್ ರಾವ್ ಅವರ ಸ್ವಯಂ ಘೋಷಿತ ನಿಕಟವರ್ತಿ ಎಂದು ಹೇಳಲಾಗಿರುವ ವ್ಯಕ್ತಿಯೋರ್ವರು ಹಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. 
 
ಹೌದು, ನ್ಯಾ.ವೈ.ಭಾಸ್ಕರ್ ರಾವ್ ಅವರ ನಿಕಟವರ್ತಿ ಎಂದೇ ಹೇಳಲಾಗಿರುವ ವಿ.ಭಾಸ್ಕರ್ ಎಂಬುವವರು ತಮ್ಮ ಸ್ನೇಹಿತ ವಕೀಲರೋರ್ವರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 
 
ವಕೀಲರೋರ್ವರೊಂದಿಗೆ ಚರ್ಚಿಸಿದ್ದು, ಸುಮಾರು 42 ನಿಮಿಷಗಳ ಆಡಿಯೋವನ್ನು ಚರ್ಚೆಯಲ್ಲಿ ತೊಡಗಿದ್ದ ವಕೀಲರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಆ ಕ್ಲಿಪ್ ಮಾಧ್ಯಮಗಳೆದುರು ಬಹಿರಂಗಗೊಂಡಿದೆ.
 
ಆಡಿಯೋ ಕ್ಲಿಪ್ ನಲ್ಲಿ ಏನಿದೆ ?: 
ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಕೇವಲ ನೆಪ ಮಾತ್ರಕ್ಕೆ ತನಿಖಾಧಿಕಾರಿಗಳು ನೋಟೀಸ್ ನೀಡುತ್ತಿದ್ದಾರೆ. ಆದರೆ ಪ್ರಸ್ತುತದವರೆಗೂ ಕೂಡ ಯಾವೊಬ್ಬ ವ್ಯಕ್ತಿಯನ್ನೂ ತನಿಖೆ ನಡೆಸಿಲ್ಲ,
 
ದೂರು ದಾಖಲಿಸಿದ್ದ ಜಿಲ್ಲಾ ಪಂಚಾಯತ್ ಎಂಜಿನಿಯರ್ ಕೃಷ್ಣಮೂರ್ತಿ ಅವರು ಪ್ರಸ್ತುತ ಸುಮ್ಮನಾಗಿದ್ದಾರೆ. ಏಕೆಂದರೆ ಅವರ ಬೇಳೆ ಲೋಕಾಯುಕ್ತರ ಮುಂದೆ ಬೇಯೋದಿಲ್ಲ. ಅಲ್ಲದೆ ದೂರು ದಾಖಲಿಸಿರುವ ಕಾರಣ ಅವರನ್ನು ರಾವ್ ಬೆಂಬಲಿಗರು ಸುಮ್ಮನೆ ಬಿಡಲಿದ್ದಾರೆಯೇ,
 
ಲೋಕಾಯುಕ್ತರು ಫಟಭದ್ರರಾಗಿದ್ದು, ಕಾನೂನಿನ ಅಡಿಯಲ್ಲಿ ರಾವ್ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಉಡಾಫೆ ಮಾತುಗಳನ್ನಾಡಿದ್ದಾರೆ, 
 
ಲೋಕಾಯುಕ್ತ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿರುವ ರಿಯಾಜ್ ಅವರಿಗೆ ಜಂಟಿ ಆಯುಕ್ತರ ಸ್ಥಾನವನ್ನು ಕೊಡಿಸಿದ್ದೇ ನಾನು. ಪರಿಣಾಮ ಇಲಾಖೆಯ ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ಆಯುಕ್ತರಾಗಿದ್ದಾರೆ, 
 
ಪ್ರಸ್ತುತ ಲೋಕಾಯುಕ್ತರ ವಿರುದ್ಧ ಧರಣಿ ನಡೆಸುತ್ತಿದ್ದಾರೆ. ಆದರೆ ಬಿಬಿಎಂಪಿ ಚುನಾವಣೆ ಘೋಷಣೆಯಾದರೆ ಅದಾವುದಕ್ಕೂ ಅವಕಾಶವಿಲ್ಲ. ಚುನಾವಣೆ ಘೋಷಣೆ ಆದ ಮೇಲೆ ಏನು ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ