14 ಕಡೆ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ 4.6 ಕೋಟಿ ಮೌಲ್ಯದ ಆಸ್ತಿ ಪತ್ತೆ

ಶನಿವಾರ, 31 ಜನವರಿ 2015 (17:42 IST)
ಲೋಕಾಯುಕ್ತ ಪೊಲೀಸರು ದಾವಣಗೆರೆ, ಉತ್ತರ ಕನ್ನಡ, ಕಲ್ಬುರ್ಗಿ, ಹಾವೇರಿ ಹಾಗೂ ಬೀದರ್ ಸೇರಿದಂತೆ ನಗರದ ಇತರೆ 14 ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಒಟ್ಟು 4.6 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. 
 
ಬೀದರ್‌ನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ರಾಜೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಸುಮಾರು 84 ಲಕ್ಷದ 67 ಸಾವಿರ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 
 
ಕಲ್ಬುರ್ಗಿಯ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಸಂಗಪ್ಪ ಕುಂಸಿ ಅವರ ನಗರದ ಅಕ್ಕಮಹಾದೇವಿ ನಗರದ ನಿವಾಸ ಹಾಗೂ ಕಚೇರಿ ಮೇಲೆ, ಡಿವೈಎಸ್‌ಪಿ ನಾಗರಾಜ್ ಅವರ ನೇತೃತ್ವದಲ್ಲಿ ಹಾವೇರಿಯ ಜಿಲ್ಲಾ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ನಿರ್ದೇಶಕಿ ಶಕುಂತಲಾ ಅವರ ನಗರದ ಬಸವೇಶ್ವರ ನಗರದಲ್ಲಿನ ನಿವಾಸದ ಮೇಲೆ, ಡಿವೈಎಸ್‌ಪಿ ಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಉನ್ನತಾಧಿಕಾರಿ ಪ್ರಕಾಶ್ ಶೆಟ್ಟಿ, ದಾವಣಗೆರೆ ಉನ್ನತಾಧಿಕಾರಿ ಅರುಣಿ ನಾಯಕ್ ಹಾಗೂ ಡಿವೈಎಸ್‌ಪಿ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಬೀದರ್‌ನ ಪ್ರಥಮ ದರ್ಜೆ ಸಹಾಯಕ ಉನ್ನತಾಧಿಕಾರಿ ರಾಜೇಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಒಟ್ಟು 4.6 ಕೋಟಿ ಮೌಲ್ಯದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 

ವೆಬ್ದುನಿಯಾವನ್ನು ಓದಿ