ಲೋಕಾಯುಕ್ತ, ಉಪಲೋಕಾಯುಕ್ತ ಪದಚ್ಯುತಿ: ತನಿಖಾ ಸಮಿತಿ ರಚನೆಗೆ ಮನವಿ

ಭಾನುವಾರ, 29 ನವೆಂಬರ್ 2015 (13:40 IST)
ಲೋಕಾಯುಕ್ತ, ಉಪಲೋಕಾಯುಕ್ತ ಪದಚ್ಯುತಿ ಪ್ರಸ್ತಾಪಗಳನ್ನು ಕುರಿತು  ಆರೋಪ, ಪ್ರತ್ಯಾರೋಪ ಸಹಜವಾಗಿದ್ದು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗೆ ತನಿಖಾ ಸಮಿತಿಯನ್ನು ರಚಿಸುವಂತೆ ಮನವಿ ಸಲ್ಲಿಸಲಾಗುತ್ತದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

 ವಿಧಾನಸಭೆ ಕಲಾಪದಲ್ಲಿ ಇವರಿಬ್ಬರ ಪದಚ್ಯುತಿ ನಿರ್ಣಯದ ಪ್ರಸ್ತಾಪ ಮಂಡನೆ ಮಾಡಲಾಗಿತ್ತು.  ಈ ಮನವಿ ಸಲ್ಲಿಸಲು ನೀಡುವ ದಾಖಲಾತಿಗಳನ್ನು ಈಗ ಕಾಗೋಡು ಪರಿಶೀಲಿಸುವ ಕಾರ್ಯವನ್ನು ಮಾಡುತ್ತಿದ್ದು, ಇನ್ನೊಂದು ವಾರದಲ್ಲಿ ಈ ಪ್ರಸ್ತಾವನೆಯನ್ನು ಕಳಿಸಲಾಗುತ್ತದೆ ಎಂದು ಹೇಳಿದರು.

 ಲೋಕಾಯುಕ್ತ ಭಾಸ್ಕರರಾವ್ ಪದಚ್ಯುತಿಗೆ ಸಹಿಸಂಗ್ರಹಿಸಿದ ಬೆನ್ನಲ್ಲೇ ಉಪಲೋಕಾಯುಕ್ತರ ಪದಚ್ಯುತಿಗೆ ಕೂಡ ಕಾಂಗ್ರೆಸ್ ಸಹಿ ಸಂಗ್ರಹ ಮಾಡಿತ್ತು. ಉಪಲೋಕಾಯುಕ್ತ ಸುಬಾಷ್ ಬಿ ಅಡಿ ಅವರ ಪದಚ್ಯುತಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದರು. 

ವೆಬ್ದುನಿಯಾವನ್ನು ಓದಿ