ಕುಕ್ಕೆ ಸುಬ್ರಮಣ್ಯದಲ್ಲಿ ಮತ್ತೆ ಷುರುವಾಯ್ಡು ಎಂಜಲೆಲೆಯ ಮೇಲೆ ಉರುಳಾಟ

ಮಂಗಳವಾರ, 25 ನವೆಂಬರ್ 2014 (15:22 IST)
ಮಡೆಸ್ನಾನಕ್ಕೆ ವಿರೋಧ ಮತ್ತು ಪರ ಅಭಿಪ್ರಾಯಗಳ ನಡುವೆ  ಮೊದಲನೆ ದಿನವಾದ ಇಂದು ಮಡೆ ಮಡೆ ಸ್ನಾನ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸುಗಮವಾಗಿ ನೆರವೇರಿತು. ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಯಿತು ಮತ್ತು ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಭಕ್ತರು ಉರುಳಾಡುವ ಮೂಲಕ ತಮ್ಮ ಭಕ್ತಿಪ್ರದರ್ಶನ ಮಾಡಿದರು.

ಆದರೆ ಮಡೆಸ್ನಾನಕ್ಕೆ ವಿರೋಧ ಸೂಚಿಸಿ ಡಿವೈಎಫ್‌ಐ, ದಲಿತ ಸಂಘಟನೆಗಳುಮತ್ತು ವಿವಿಧ ಪ್ರಗತಿಪರ ಸಂಘಟನೆಗಳು  ವಿರೋಧ ವ್ಯಕ್ತಪಡಿಸಿದವು. ಧರಣಿಯಲ್ಲಿ ಹಲವು ಸಂಘಟನೆಗಳು ಭಾಗಿಯಾಗಿದ್ದವು.

 ಮಡೆ ಸ್ನಾನ ಧಾರ್ಮಿಕ ಅಂಧಾನುಕರಣೆಯಾಗಿದ್ದು, ಸರ್ಕಾರ ಆ ಪದ್ಧತಿಯನ್ನು ಅಳಿಸಬೇಕು ಎಂದು ಒತ್ತಾಯಿಸಿದವು.  ಕುಕ್ಕೆ ಸುಬ್ರಮಣ್ಯದಲ್ಲಿ ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಭಕ್ತರು ಹೊರಳಾಡುವುದರಿಂದ ಚರ್ಮರೋಗ ವಾಸಿಯಾಗುತ್ತದೆಂದು ನಂಬಲಾಗಿದೆ.

ವೆಬ್ದುನಿಯಾವನ್ನು ಓದಿ