ಲೈಂಗಿಕ ಕಿರುಕುಳದ ಆರೋಪ: ಮದ್ರಸಾ ಶಿಕ್ಷಕನ ಬಂಧನ

ಸೋಮವಾರ, 19 ಮೇ 2014 (20:21 IST)
ಕಾಸರಗೋಡಿನ ವಿದ್ಯಾನಗರ ಪೊಲೀಸರು ಮದ್ರಾಸಾದ ಶಿಕ್ಷಕರನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಿದ್ದಾರೆ. ಮದ್ರಸಾದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗೆ ಈ ಕಾಮಪಿಪಾಸು ಲೈಂಗಿಕ ಕಿರುಕುಳ ನೀಡುತ್ತಿದ್ದನೆಂಬ ಆರೋಪ ಕೇಳಿಬಂದಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.

ಚೈಲ್ಡ್‌ಲೈನ್ ಬ್ಯೂರೋ ನೀಡಿದ ಮಾಹಿತಿಯನ್ನು ಆಧರಿಸಿ, ಪೊಲೀಸರು 38 ವರ್ಷ ವಯಸ್ಸಿನ ಅಬುಬಕ್ಕೇರಿ ದಾರಿಮಿಯನ್ನು ಬಂಧಿಸಿತು. ಅವನು ಕಳೆದ 18 ವರ್ಷಗಳಿಂದ ಮದ್ರಸಾದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಶಿಕ್ಷಕ ಕನಿಷ್ಟ 10 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಚೈಲ್ಡ್‌ಲೈನ್ ಬ್ಯೂರೋ ಆರೋಪಿಸಿದೆ.

ವಿದ್ಯಾನಗರ ಪೊಲೀಸರು ಅಬೂಬಕರ್ ಬಂಧನಕ್ಕೆ ತಕ್ಷಣದ ಕ್ರಮ ಕೈಗೊಂಡಿದ್ದು, ಅವನ ವಿರುದ್ದ ಕೇಸ್ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.

ವೆಬ್ದುನಿಯಾವನ್ನು ಓದಿ