ಮಹದಾಯಿ ನದಿ ಹಂಚಿಕೆ: ತೀರ್ಪು ಬರುವವರೆಗೆ ಕಾಯುವಂತೆ ಉಮಾಭಾರತಿ ಪತ್ರ

ಶನಿವಾರ, 30 ಜನವರಿ 2016 (12:22 IST)
ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಕರ್ನಾಟಕದ ಮಾತುಕತೆ ಪ್ರಸ್ತಾಪಕ್ಕೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸ್ಪಷ್ಟವಾಗಿ ನಿರಾಕರಿಸಿರುವುದು ಉತ್ತರ ಕರ್ನಾಟಕದ ಭಾಗದ ಜನರಿಗೆ ಬರಸಿಡಿಲಿನಂತೆ ಬಂದೆರಗಿದೆ. ಈ ಕುರಿತು ಉಮಾಭಾರತಿ  ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಅಂತಿಮ ತೀರ್ಪು ಬರುವವರೆಗೆ ಕಾಯಿರಿ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಡಿ ಎಂದು ಹೇಳಿದ್ದಾರೆ.

ಉಮಾಭಾರತಿ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಿಂದ ಪ್ರತಿಭಟನೆಕಾರರಿಗೆ ಮತ್ತಷ್ಟು ನಿರಾಸೆಯನ್ನು ತರಲಿದೆ. ಉಮಾಭಾರತಿ ಪತ್ರದಿಂದ ಮಾತುಕತೆ ಮೂಲಕ ಮಹದಾಯಿ ನೀರು ಹಂಚಿಕೆ ವಿವಾದ ಇತ್ಯರ್ಥ ಮಾಡಿಕೊಳ್ಳುವ ನಿರ್ಧಾರಕ್ಕೆ ಪೆಟ್ಟುಬಿದ್ದಿದೆ.

ಗೋವಾ ಮುಖ್ಯಮಂತ್ರಿ ಕೂಡ ಅದೇ ರೀತಿಯ ಪತ್ರ ಬರೆದಿರುವುದು  ಉತ್ತರ ಕರ್ನಾಟಕ ಭಾಗದ ಜನರು ನೂರಾರು ದಿನಗಳಿಂದ ಮಾಡುತ್ತಿದ್ದ ಪ್ರತಿಭಟನೆಯು ಈಗ ನೀರಿನಲ್ಲಿ ಹೋಮಮಾಡಿದಂತಾಗಿದೆ.  ಅಪ್ಪ, ಅಮ್ಮ ಜಗಳದಿಂದ ಕೂಸು ಬಡವಾಯ್ತು ಎಂಬ ಹಾಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವೈಮನಸ್ಸಿನಿಂದ ಕರ್ನಾಟಕದ ಉತ್ತರಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಸಿಗದ ಹಾಗಾಗಿದೆ.

ವೆಬ್ದುನಿಯಾವನ್ನು ಓದಿ