ಮಹದಾಯಿ ವಿವಾದ: ಇಂದು ರಾಜ್ಯದ ಸಾಕ್ಷಿಗಳ ಕುರಿತು ವಿಚಾರಣೆ

ಮಂಗಳವಾರ, 29 ನವೆಂಬರ್ 2016 (11:02 IST)
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮಹದಾಯಿ ನ್ಯಾಯಾಧೀಕರಣದ ಮುಂದೆ ವಿಚಾರಣೆ ನಡೆಯಲಿದ್ದು, ನ್ಯಾಯಾಲಯಕ್ಕೆ ಕರ್ನಾಟಕ ಸಲ್ಲಿಸಿದ ಸಾಕ್ಷಿಗಳ ಕುರಿತು ವಿಚಾರಣೆ ನಡೆಯಲಿದೆ.
ರಾಜ್ಯದ ಪರವಾಗಿ ಮಹದಾಯಿ ಕಣಿವೆ ಕುರಿತು ನವದೆಹಲಿಯ ಐಐಟಿ ಪ್ರೊ.ಎ.ಕೆ.ಗೋಸೇನ್ ಅಧ್ಯಯನ ತಂಡ ತನ್ನ ವರದಿಯನ್ನು ನ್ಯಾಯಾಧೀಕರಣಕ್ಕೆ ಸಲ್ಲಿಸಿದೆ.
 
ಮಹದಾಯಿ ಕಣಿವೆಯಲ್ಲಿ 200 ಟಿಎಂಸಿಗೂ ಅಧಿಕ ನೀರಿದೆ ಎಂಬ ಕರ್ನಾಟಕದ ವಾದವನ್ನು ಗೋವಾ ಸರಕಾರ ಅಲ್ಲೆಗೆಳೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ನ್ಯಾಯಾಧೀಕರಣ ಯಾವ ರೀತಿಯ ತೀರ್ಪನ್ನು ನೀಡುತ್ತದೆ ಎಂದು ನೋಡಲು ಉತ್ತರ ಕರ್ನಾಟಕದ ಜನತೆ ಕಾಯ್ದುಕುಳಿತಿದ್ದಾರೆ.

ವೆಬ್ದುನಿಯಾವನ್ನು ಓದಿ