ಅಕ್ರಮ ಮರಳುಗಾರಿಕೆ: ಹೆಚ್‌ಡಿಕೆ ಆರೋಪಕ್ಕೆ ಮಹಾದೇವಪ್ಪ ಕೆಂಡಾಮಂಡಲ

ಗುರುವಾರ, 18 ಡಿಸೆಂಬರ್ 2014 (15:27 IST)
ಇಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ಗಣಿಗಾರಿಕೆ ತಾಂಡವವಾಡುತ್ತಿದ್ದು, ಅದಕ್ಕೆ ಕಾರಣ ಲೋಖೋಪಯೋಗಿ ಸಚಿವರೇ ಕಾರಣ ಎಂದು ಲೋಖೋಪಯೋಗಿ ಸಚಿವ ಹೆಚ್.ಸಿ.ಮಹಾದೇವಪ್ಪ ಅವರನ್ನು ಆರೋಪಿಸಿದರು.
 
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಮೈಸೂರಿನ ಟಿ.ನರಸೀಪುರದ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅತಿಯಾಗಿ ನಡೆಯುತ್ತಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಅವರ ಮಕ್ಕಳೇ ನಡೆಸುತ್ತಿದ್ದು, ಆ ಅಕ್ರಮದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹಾದೇವಪ್ಪ ಅವರೂ ಭಾಗಿಯಾಗಿದ್ದಾರೆ ಎಂದು ಸಭಾಧ್ಯಕ್ಷರ ಸಮ್ಮುಖದಲ್ಲಿ ಆರೋಪಿಸಿದರು.  
 
ಇದರಿಂದ ಕುಪಿತಗೊಂಡ ಸಚಿವರು, ನರಸೀಪುರ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರಬಹುದು. ಆದರೆ ಆ ಅಕ್ರಮ ಗಣಿಗಾರಿಕೆಯಲ್ಲಿ ಯಾವುದೇ ರೀತಿಯಲ್ಲಿ ಕೂದತೆಳೆಯಷ್ಟೂ ನನ್ನ ಪಾತ್ರವಿಲ್ಲ. ಒಂದು ವೇಳೆ ಕುಮಾರಸ್ವಾಮಿಯವರು ಹೇಳುತ್ತಿರುವುದು ನಿಜವೇ ಆಗಿದ್ದಲ್ಲಿ ಸೂಕ್ತ ದಾಖಲೆಗಳನ್ನು ತಂದು ಸಾಬೀತು ಪಡಿಸಲಿ. ಆರೋಪ ಸಾಬೀತಾದಲ್ಲಿ ರಾಜಕಾರಣದಿಂದ ಸಂಪೂರ್ಣವಾಗಿ ದೂರವಾಗುತ್ತೇನೆ ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.    

ವೆಬ್ದುನಿಯಾವನ್ನು ಓದಿ