ಮೈತ್ರಿಯಾ ಜೊತೆ ವಿವಾಹ ಸಿಂಧುಗೊಳಿಸಿ: ಕೋರ್ಟ್‌ಗೆ ರಿಷಿ ಮನವಿ

ಗುರುವಾರ, 18 ಸೆಪ್ಟಂಬರ್ 2014 (17:43 IST)
ಮೈತ್ರಿಯಾಗೌಡ ಜೊತೆ ತಮ್ಮ ವಿವಾಹ ಸಿಂಧುಗೊಳಿಸಿ ಅವರ ಜೊತೆ ಬಾಳಲು ಸೂಚಿಸಿ ಎಂದು ನಿರ್ದೇಶಕ ರಿಷಿ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಕೌಟುಂಬಿಕ ಕೋರ್ಟ್‌ನಲ್ಲಿ ಈ ಕುರಿತು ಮನವಿ ಸಲ್ಲಿಸಿದ್ದು, ಸೂರ್ಯಾ ದಿ ಗ್ರೇಟ್ ಚಿತ್ರದಲ್ಲಿ ನಮ್ಮಿಬ್ಬರಿಗೂ ಪರಿಚಯವಾಗಿ ಮದುವೆಯಾಗಿ ನಾಲ್ಕು ತಿಂಗಳ ಕಾಲ ಲಾಡ್ಡ್‌ನಲ್ಲಿ ಸಂಸಾರ ಮಾಡಿದ್ದೇವೆ.

ನನ್ನ ಪತ್ನಿ ನನ್ನ ಬಳಿಗೆ ಬರುವಂತೆ ಆದೇಶಿಸಿ ಎಂದು ರಿಷಿ ಮನವಿಯಲ್ಲಿ ತಿಳಿಸಿದ್ದಾರೆ. ರಿಷಿ ಮೈತ್ರಿಯಾ ಗೌಡ ಜೊತೆ ಮದುವೆಯಾಗಿರುವ ಎಲ್ಲಾ ಸಾಕ್ಷ್ಯಗಳನ್ನು ಹಾಜರುಪಡಿಸಿದ ನಂತರ ಕೋರ್ಟ್ ಈ ಕುರಿತು ತೀರ್ಪು ನೀಡಲಿದೆ.

ಮೈತ್ರಿಯಾ ಗೌಡ ತನ್ನನ್ನು ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ  ಮದುವೆಯಾಗಿ ವಂಚಿಸಿದ್ದಾನೆಂದು ದೂರು ನೀಡಿದ ನಂತರ ರಿಷಿ ಎಂಟ್ರಿ ಕೊಟ್ಟು ಮೈತ್ರಿಯಾಳನ್ನು ತಾನು ಈ ಮುಂಚೆಯೇ ಮದುವೆಯಾಗಿದ್ದಾಗಿ ಹೇಳಿದ್ದರು. 

ವೆಬ್ದುನಿಯಾವನ್ನು ಓದಿ