ಕಾರ್ತಿಕ್ ಗೌಡ ಜೊತೆ ಮದುವೆ ಘೋಷಣೆ ಕೋರಿದ್ದ ಮೈತ್ರಿಯಾ ಅರ್ಜಿ ವಜಾ

ಬುಧವಾರ, 26 ನವೆಂಬರ್ 2014 (17:35 IST)
ಸಚಿವ ಡಿ. ವಿ. ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಜೊತೆ ತಮ್ಮ ಮದುವೆ ಘೋಷಣೆ ಕೋರಿದ್ದ ಮೈತ್ರಿಯಾ ಅರ್ಜಿ ವಜಾಗೊಂಡಿದೆ. ಅರ್ಜಿ ವಜಾ ಕೋರಿ ಕಾರ್ತಿಕ್ ಗೌಡ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಈ ಕುರಿತು ಅರ್ಜಿ ವಜಾ ಮಾಡಿದೆ. ಮದುವೆಗೆ ಸಂಬಂಧಿಸಿದ ಸೂಕ್ತ ಪುರಾವೆಗಳನ್ನು ಒದಗಿಸದೇ ಇರುವುದರಿಂದ ಅರ್ಜಿಯನ್ನು ವಜಾ ಮಾಡಿರುವುದಾಗಿ ಕೌಟುಂಬಿಕ ನ್ಯಾಯಾಲಯ ತಿಳಿಸಿದೆ.

ಕಾರ್ತಿಕ್ ಗೌಡ ಅವರ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಸಚಿವ ಡಿವಿಎಸ್ ಪುತ್ರ ಕಾರ್ತಿಕ್ ಗೌಡ ವಿರುದ್ಧ ವಂಚನೆ, ಅತ್ಯಾಚಾರದ ದೂರು ನೀಡಿದ್ದ  ಮೈತ್ರಿಯಾ ಗೌಡ  ತೀವ್ರ ಬಳಲಿಕೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಡಿವಿಎಸ್ ಪುತ್ರ ಕಾರ್ತಿಕ್ ಗೌಡ ತಮ್ಮನ್ನು ಮದುವೆಯಾದ ಬಳಿಕ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವಂಚನೆ ಮಾಡಿದ್ದಾರೆಂದು ಮೈತ್ರಿಯಾ ದೂರು ನೀಡಿದ್ದು, ವಂಚನೆ, ಅತ್ಯಾಚಾರ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.
 
ಈ ಕುರಿತು ಪೊಲೀಸರು ಮೈತ್ರಿಯಾ ಅವರನ್ನು ಸುಮಾರು 8 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸತತ ವಿಚಾರಣೆಯಿಂದ ಮತ್ತು ಮಾನಸಿಕ ವೇದನೆಯಿಂದ ಹಾಗೂ ಆಹಾರ ಸೇವಿಸದೇ ಬಳಲಿಕೆಯಿಂದ ತೀವ್ರ ಅಸ್ವಸ್ಥರಾಗಿದ್ದ ಮೈತ್ರಿಯಾ ಅವರನ್ನು ಚೈತನ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ