ಮಲಪ್ರಭಾ ನದಿ ಜೋಡಣೆ ವಿಚಾರ: ಪ್ರಧಾನಿಗೆ ಮತ್ತೊಮ್ಮೆ ರಕ್ತದಲ್ಲಿ ಮನವಿ ಸಲ್ಲಿಸಿದ ರೈತರು

ಶುಕ್ರವಾರ, 4 ಸೆಪ್ಟಂಬರ್ 2015 (13:45 IST)
ಮಹದಾಯಿ ಮತ್ತು ಮಲಪ್ರಭಾ ನದಿ ಜೋಡಣೆಗೆ ಒತ್ತಾಯಿಸಿ ನಡೆಸಲಾಗುತ್ತಿರುವ ಪ್ರತಿಭಟನೆಯು ಇಂದಿಗೆ 51ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದಿದೆ. 
 
ರಾಜ್ಯದಿಂದ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ದರೂ ಕೂಡ ಪ್ರಯೋಜನವಾಗಲಿಲ್ಲ ಎಂದು ಕುಪಿತಗೊಂಡಿರುವ ರೈತರು, ನರಗುಂದ ನಗರದಿಂದ ಜಿಲ್ಲಾ ಕೇಂದ್ರ ಗದಗ ನಗರಕ್ಕೆ ತೆರಳಿ ಇಲ್ಲಿನ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 
 
ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಗರಂ ಆಗಿದ್ದು, ಇಲ್ಲಿ ಮಲಪ್ರಭಾ ನದಿಯ ಉಗಮ ಸ್ಥಾನ ಮಾವುಲಿ ಅಮ್ಮನ ಭಾವಚಿತ್ರಕ್ಕೆ ರಕ್ತಾಭಿಷೇಕ ಮಾಡಿದರು. ಅಲ್ಲದೆ ರಕ್ತದ ಸಹಿ ಸಂಗ್ರಹಿಸಿ ತಹಶೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂತಿಮ ಮನವಿ ಸಲ್ಲಿಸಿದರು. ಈ ಹಿಂದೆಯೂ ಕೂಡ ರಕ್ತದಲ್ಲಿ ಪತ್ರ ಬರೆದು ಪ್ರಧಾನಿಗಳಿಗೆ ಸಲ್ಲಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ