ಹುಬ್ಬಳ್ಳಿ: ಶಿಕ್ಷಕನಿಂದ ಶಿಕ್ಷಕಿಗೆ ಮಾನಸಿಕ ಕಿರುಕುಳ

ಮಂಗಳವಾರ, 22 ಜುಲೈ 2014 (09:27 IST)
ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಶಾಲಾ ಶಿಕ್ಷಕರೊಬ್ಬರು ತಮ್ಮ ಸಹೋದ್ಯೋಗಿ ಶಿಕ್ಷಕಿಗೆ ಕಳೆದ 4 ವರ್ಷಗಳಿಂದ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. 

ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲೀಷ್  ಬಾಲಕರ ಶಾಲೆಯಲ್ಲಿ ನಡೆದ ಈ ಘಟನೆಯಲ್ಲಿ ಸಂಜೀವ್ ಎಸ್ ಎನ್ ಎಂಬ ಶಿಕ್ಷಕರು  ವಿನಾಕಾರಣ ತಮ್ಮ ಮೈಮುಟ್ಟಿ ಮಾತನಾಡುತ್ತಾರೆ, ಅಸಭ್ಯವಾಗಿ  ಮಾತನಾಡುತ್ತಾರೆ, ಉಢಾಳ ಮಕ್ಕಳನ್ನು ಪ್ರಚೋದಿಸುತ್ತಾರೆ ಎಂದು ಜೂನ್ 14 ಮತ್ತು 17ರಂದು ಶಾಲಾ ಆಡಳಿತ ಮಂಡಳಿಗೆ  ದೂರು ನೀಡಿದ್ದಾರೆ. 
 
ಆದರೆ ಶಾಲಾ ಆಡಳಿತ ಮಂಡಳಿ ಈ ಪ್ರಕರಣವನ್ನು ಗಂಭೀರವಾಗಿ  ಪರಿಗಣಿಸದೇ ಸಂಧಾನದ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ. 
 
ಆದರೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುವ  ಶಿಕ್ಷಕ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಮ್ಮಿಬ್ಬರ ನಡುವೆ ನಡೆದ ಕ್ಷುಲ್ಲಕ ವಿವಾದಕ್ಕೆ ಪ್ರತೀಕಾರವಾಗಿ ಶಿಕ್ಷಕಿ  ಈ ರೀತಿ ಅಪವಾದ ಹೊರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ