50 ಅಡಿ ಎತ್ತರದ ಮರದಿಂದ ಬಿದ್ದರೂ ಪ್ರಾಣಾಪಾಯದಿಂದ ಪಾರಾದ ಮಣಿ

ಶನಿವಾರ, 30 ಆಗಸ್ಟ್ 2014 (14:35 IST)
ಮೈಸೂರಿನ ಸರಸ್ವತಿಪುರಂನಲ್ಲಿ ನೀಲಗಿರಿ ಮರಗಳನ್ನು ಕಡಿಯುತ್ತಿದ್ದ ತಮಿಳುನಾಡಿನ ಮಣಿ ಎಂಬವ ಮರದ ಮೇಲಿಂದ 50 ಅಡಿಗಳ ಎತ್ತರದಿಂದ ನೆಲಕ್ಕೆ ಬಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ಸರಸ್ವತಿ ಪುರಂಲ್ಲಿ ನೀರು ಚರಂಡಿ ಮಂಡಳಿ ಆವರಣದಲ್ಲಿ ನೀಲಗಿರಿ ಮರಗಳನ್ನು ಕತ್ತರಿಸಲು ನಿರ್ಧರಿಸಲಾಗಿತ್ತು.

ತಮಿಳುನಾಡಿನ ಕಾರ್ಮಿಕ ಮಣಿ ಎಂಬಾತ ನೀಲಗಿರಿ ಮರಹತ್ತಿ ಕತ್ತರಿಸುತ್ತಿದ್ದಾಗ ಕೊಂಬೆಯೇ ಮುರಿದು ಬಿದ್ದು ಆಯತಪ್ಪಿದ ಮಣಿ 50ಅಡಿ ಎತ್ತರದಿಂದ ನೇರವಾಗಿ ಕೆಳಕ್ಕೆ ಬೀಳಲಾರಂಭಿಸಿದರು. ಮಣಿ ಕೊಂಬೆಯನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ರಭಸವಾಗಿ ಕೆಳಗೆ ಬೀಳುವುದು ತಪ್ಪಿದೆ.

ಮರದ ಕೆಳಗಿದ್ದ  ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದ್ದರೆ ಮಣಿಯ ಜೀವಕ್ಕೆ ಅಪಾಯವಿತ್ತು.   ಸುಮಾರು 50 ಅಡಿ ಎತ್ತರದಿಂದ ನೋಡುನೋಡುತ್ತಿದ್ದಂತೆ ಮರದ ಕೊಂಬೆಯೊಂದಿಗೆ ನೆಲಕ್ಕೆ ಬೀಳಲಾರಂಬಿಸಿದ ದೃಶ್ಯವನ್ನು ಪ್ರತ್ಯಕ್ಷದರ್ಶಿ ಬಾಬು ಎಂಬವರ ಮೊಬೈಲ್ ವಿಡಿಯೋದಲ್ಲಿ ಚಿತ್ರೀಕರಿಸಿಕೊಂಡರು. 

ವೆಬ್ದುನಿಯಾವನ್ನು ಓದಿ