ವಿಧಾನ ಪರಿಷತ್ ಉಪ ಸಭಾಪತಿಯಾಗಿ ಮರಿತಿಬ್ಬೇಗೌಡ ಆಯ್ಕೆ

ಶನಿವಾರ, 1 ಆಗಸ್ಟ್ 2015 (11:38 IST)
ರಾಜ್ಯದ ಮೇಲ್ಮನೆ ವಿಧಾನ ಪರಿಷತ್‌ನಲ್ಲಿ ಖಾಲಿ ಉಳಿದಿದ್ದ ಉಪ ಸಭಾಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಅಂತಿಮವಾಗಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಆಯ್ಕೆಯಾಗಿದ್ದಾರೆ. 
 
ಸ್ಥಾನದ ಆಯ್ಕೆಗಾಗಿ ಇಂದು ಚುನಾವಣೆ ನಡೆಸಲಾಗಿದ್ದು, ಮರಿತಿಬ್ಬೇಗೌಡ ಅವರು 42 ಮತಗಳನ್ನು ಪಡೆದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಸದಸ್ಯ ಧರ್ಮಸೇನಾ 29 ಮತಗಳನ್ನು ಪಡೆದರು. ಈ ಹಿನ್ನೆಲೆಯಲ್ಲಿ ಮರಿತಿಬ್ಬೇಗೌಡ ಅವರನ್ನು ಅಂತಿಮವಾಗಿ ಉಪ ಸಭಾಪತಿಗಳನ್ನಾಗಿ ಘೋಷಿಸಲಾಯಿತು. 
 
ಇನ್ನು ಕಡ್ಡಾಯವಾಗಿ ಮತ ಚಲಾಯಿಸುವಂತೆ ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು. ಆದರೂ ಕೂಡ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಗೈರಾಗಿದ್ದರು. ಅಲ್ಲದೆ ಮತ್ತೋರ್ವ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಗುಪ್ತ ಮತದಾನ ನಡೆಸಬೇಕೆಂದು ಮನವಿ ಮಾಡಿದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಸಭಾಪತಿ ಡಿ.ಹೆಚ್.ಶಂಕರ್ ಮೂರ್ತಿ ಅವರು, ಧ್ವನಿ ಮತದಾನ ನಡೆಸಿದರು. ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರೂ ಸದಸ್ಯರು ನಿನ್ನೆ ಸದನದ ಮುಖ್ಯ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಿದ್ದರು. 

ವೆಬ್ದುನಿಯಾವನ್ನು ಓದಿ